ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವಧ೯ಂತಿ

Views: 3
ಕುಂದಾಪುರ :ಭಕ್ತಿಯ ಜಾಗೃತಿ ಕೇಂದ್ರ ದೇಗುಲ, ಇಂತಹ ಶೃದ್ಧಾ ಕೇಂದ್ರದಲ್ಲಿ ಭಗವಂತನನ್ನು ಒಲಿಸಿಕೊಳ್ಳುವುದಲ್ಲದೆ, ಸಂಸ್ಕಾರ ಆಚಾರ ವಿಚಾರಗಳಿಂದ ಉತ್ತಮ ವ್ಯಕ್ತಿತ್ವದಿಂದ ಆದಶ೯ ಸಮಾಜ ನಿರ್ಮಾಣ ಸಾದ್ಯ ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀಥ೯ ಶ್ರೀ ಪಾದರು ಹೇಳಿದರು

. ಅವರು ಎ. 25 ರಂದು ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ವಧ೯ಂತ್ಯುತ್ಸವ ಹಾಗೂ ರಂಗಮಂಟಪವನ್ನು ಉಧ್ಘಾಟಿಸಿ, ಆಶೀವ೯ಚನ ನೀಡುತ್ತಾ ಮಾತನಾಡಿದರು.

ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುಬಾಯಿ ಉದ್ಯಮಿ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧಮ೯ದಶಿ೯ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ಭಗವಂತನನ್ನು ಕೇವಲ ದ್ಯಾನ ಮಾಡಿದರೆ ಸಾಲದು ದೇವರನ್ನು ಭಕ್ತಿಯಿಂದ ಸದಾ ನೆನಪಿಸಿಕೊಂಡಾಗ ಸಮಾಜದಲ್ಲಿ ಶಾಂತಿ ಮತ್ತು ಸ್ವಾಸ್ಥ್ಯ ಪಡೆಯಬಹುದು ಎಂದರು.

ಆಯುವೇ೯ದ ವೈದ್ಯರಾದ ಡಾ. ವಿಜಯ ಮಂಜ ಧಾಮಿ೯ಕ ಪ್ರವಚನ ನೀಡಿದರು. ಅನುವಂಶಿಕ ಮೊಕ್ತೇಸರರಾದ ವಿ. ಲಕ್ಷ್ಮಿ ನಾರಾಯಣ ಹೊಳ್ಳ, ಶ್ರೀ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಯೋಜನಾಧಿಕಾರಿ ಶ್ರೀ ನಾರಾಯಣ ಪಾಲನ್,ವೇದಮೂತಿ೯ಗಳಾದ ಸುಬ್ರಹ್ಮಣ್ಯ ಐತಾಳ್, ಕೃಷ್ಣ ಐತಾಳ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದಭ೯ದಲ್ಲಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ, ವೇದಮೂತಿ೯ ಸುಬ್ರಹ್ಮಣ್ಯ ಐತಾಳ್, ಗುತ್ತಿಗೆದಾರ ಸತ್ಯನಾರಾಯಣ ಶೆಟ್ಟಿ, ದ್ಯಾಗಳ ಮನೆ ದಿನಕರ ಶೆಟ್ಟಿ, ಲೆಕ್ಕ ಪರಿಶೋಧಕ ಚಂದ್ರಶೇಖರ್ ಶೆಟ್ಟಿ, ಗುತ್ತಿಗೆದಾರ ರಂಜಿತ್ ಕುಮಾರ್ ಶೆಟ್ಟಿ ಇನ್ನಿತರ ಧಾನಿಗಳನ್ನು ಸಮ್ಮಾನಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕ ವೇಣುಗೋಪಾಲ ಹೆಗ್ಡೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಗಿರೀಶ್ ಐತಾಳ್ ಮತ್ತು ಶಿಕ್ಷಕ ಸದಾನಂದ ಶೆಟ್ಟಿ ನಿರೂಪಿಸಿದರು. ಅಚ೯ಕ ಗಿರೀಶ್ ಐತಾಳ್ ವಂದಿಸಿದರು. ನಂತರ ಶಿವಧೂತ ಗುಳಿಗ ಎಂಬ ವಿಭಿನ್ನ ಶೈಲಿಯ ನಾಟಕ ಪ್ರದಶ೯ನಗೊಂಡಿತು.






