ಶಿಕ್ಷಣ
ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ ವಿದ್ಯಾರ್ಥಿಗಳು ಕರಾಟೆ ವೈಟ್ ಮತ್ತು ಯಲ್ಲೋ ಬೆಲ್ಟ್ ಪರೀಕ್ಷೆಯಲ್ಲಿ ಉತ್ತಿರ್ಣ

Views: 589
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲಿನ 3ರಿಂದ 7ನೇ ತರಗತಿ ವಿದ್ಯಾರ್ಥಿಗಳು ದಿನಾಂಕ13/09/2024 ರಂದು ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಆರಂಭ ಸಭಾಂಗಣದಲ್ಲಿ ಐಕೀ ಸ್ಕೂಲ್ ಆಫ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಮತ್ತು ಕೇರಳ 8th ಡಾನ್ ಐಕೀ ಸ್ಕೂಲ್ ಬ್ಲಾಕ್ ಬೆಲ್ಟ್ ಆಫ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಅಡಿ ನಡೆದ ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ 75 ವಿದ್ಯಾರ್ಥಿಗಳು ಉತ್ತಿರ್ಣರಾಗಿ ವಿವಿಧ ಕರಾಟೆ ಬೆಲ್ಟ್ ಪಡೆದಿರುತ್ತಾರೆ.
ಈ ಪರೀಕ್ಷೆಯನ್ನು ಚೀಫ್ ಇನ್ಸ್ಪೆಕ್ಟರ್ ಆದ ಕೋಶಿ ಸಿ ಎ ವಿಜಯನ್ ಕೇರಳ 8th DAN ಬ್ಲಾಕ್ ಬೆಲ್ಟ್ ಇವರ ಜಂಟಿ ಉಪಸ್ಥಿತಿಯಲ್ಲಿ ಶಾಲೆಯ ಒಟ್ಟು 75 ವಿದ್ಯಾರ್ಥಿಗಳು ವೈಟ್ ಬೆಲ್ಟ್ ಮತ್ತು ಎಲ್ಲೋ ಬೆಲ್ಟ್ ಹಾಗೂ ಸರ್ಟಿಫಿಕೇಟ್ ಪಡೆದಿರುತ್ತಾರೆ.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ,ಕರಾಟೆ ಶಿಕ್ಷಕಿ ಮೇಘನಾ, ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು.