ಸಾಂಸ್ಕೃತಿಕ

ಕೋಟೇಶ್ವರ: ರಥ ಶಿಲ್ಪಿ ರಾಜಗೋಪಾಲ ಆಚಾರ್ಯರಿಂದ ಅರಳಿದ “ರಜತ ರಥ” ಸೆ.15 ರಂದು ಕೋಟಿಲಿಂಗೇಶ್ವರ ದೇವರಿಗೆ ಸಮರ್ಪಣೆ 

Views: 273

ಕೋಟೇಶ್ವರ: ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯನ್ನು ತಂದೆಯಿಂದ ಬಳುವಳಿಯಾಗಿ ಬಂದ ಕಲೆಯನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವ ಪ್ರತಿಭಾವಂತ  ಶಿಲ್ಪ ಕಲಾವಿದ ಶ್ರೀ ರಾಜಗೋಪಾಲ ಆಚಾರ್ಯ ಅವರು ಇಂದಿನ ಆಧುನಿಕತೆಗೆ ತಕ್ಕಂತೆ ಸಾಂಪ್ರದಾಯಿಕ ಶಾಸ್ತ್ರಗಳಿಗೆ ಯಾವುದೇ ಚ್ಯುತಿ ಬಾರದಂತೆ ಆಯಾದಿ ಅಳೆತೆಗಳನ್ನು ಶಾಸ್ತ್ರೋಕ್ತವಾಗಿ ಉಪಯೋಗಿಸಿಕೊಂಡು ರಥ ನಿರ್ಮಾಣದಲ್ಲಿ ತಮ್ಮದೇ ಆದ ಚಾಕಚಕ್ಯತೆಯೊಂದಿಗೆ ರಥ ನಿರ್ಮಾಣದ ಶಿಲ್ಪಕಲೆಗಾರ ಮರದ ರಥದ ಕೆಲಸದೊಂದಿಗೆ ಬೆಳ್ಳಿಯ ಕೆಲಸವನ್ನು ನಿರ್ವಹಿಸುವಲ್ಲಿಯೂ ಸಫಲತೆಯನ್ನು ಕಂಡಿದ್ದು, ಇವರ ಸಾರಥ್ಯದಲ್ಲಿ ಹಲವಾರು ರಥಗಳಿಗೆ ಶಿಲ್ಪ ರಚನೆ, ಇವರ ನಿರ್ದೇಶನದಲ್ಲಿಯೇ ಆಗುತ್ತಿದೆ. ಜೊತೆಗೆ ಚಿನ್ನದ ಕವಚ, ಬೆಳ್ಳಿಯ ಬಾಗಿಲು, ಪ್ರಭಾವಳಿ, ದೇವರ ಕವಚ, ಬೆಳ್ಳಿಯ ಪಲ್ಲಕಿ, ಬೆಳ್ಳಿಯ ಲಾಲಕಿ, ಬೆಳ್ಳಿಯ ಮಂಟಪ, ಪೀಠಗಳು,ವೈವಿಧ್ಯಮಯ ಚಿತ್ರಕಲೆಯನ್ನು ಯಥಾವತ್ತಾಗಿ ರಚಿಸುವಲ್ಲಿ ಪ್ರಾವೀಣ್ಯತೆಯನ್ನು ಇವರು ಪಡೆದಿರುತ್ತಾರೆ.

ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ರಥ ನಿರ್ಮಾಣದ ಶಿಲ್ಪಕಲೆಯ ಮೂಲಕ ರಥದಲ್ಲಿ ನವರಸ ಕಲೆ, ವಾಸ್ತು, ಹಲವು ಸಂಪ್ರದಾಯಗಳು ಸೇರಿದಂತೆ ಎಲ್ಲಾ ಪ್ರಕಾರಗಳು ಅಡಕವಾಗಿ, ಸಾಂಪ್ರದಾಯಿಕ ನಮ್ಮ ಸಂಸ್ಕೃತಿಯನ್ನು ರಥ ನಿರ್ಮಾಣದ ಶಿಲ್ಪಕಲೆಯ ಮೂಲಕ ಅರಳಿದ “ರಜತ ರಥ” ಸುಮಾರು 1.25 ಕೋಟಿ ರೂಪಾಯಿ ವೆಚ್ಚದಲ್ಲಿ 125 ಕೆಜಿ ತೂಕದ ರಥ ನಿರ್ಮಾಣಗೊಂಡ “ರಜತ ರಥ” ಸಪ್ಟೆಂಬರ್ 15ರಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವರಿಗೆ ಸಮರ್ಪಣೆಯಾಗಲಿದೆ.

ಕೋಟೇಶ್ವರದ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಿಂದ ಸೆಪ್ಟೆಂಬರ್ 15ರಂದು ಅಪರಾಹ್ನ 3 ಗಂಟೆಗೆ 15 ಕ್ಕೂ ಹೆಚ್ಚು ಭಜನಾ ತಂಡ, ನಾಮ ಸಂಕೀರ್ತನೆ, ಕುಣಿತ ಭಜನೆಯನ್ನೊಳಗೊಂಡು  ಪೂರ್ಣಕುಂಭ ಸ್ವಾಗತ, ವೈಭವದ ಮೆರವಣಿಗೆಯೊಂದಿಗೆ ರಜತ ರಥ ದೇವಳಕ್ಕೆ ತರಲಾಗುವುದು

ದೇವಳದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಪ್ರಸನ್ನಕುಮಾರ್ ಐತಾಳ್ ನೇತೃತ್ವದಲ್ಲಿ ರಜತ ರಥ ಸಮರ್ಪಣೆಯ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ

ಕುಂದಾಪುರ ನೃತ್ಯ ವಸಂತ ನಾಟ್ಯಾಲಯ ಇವರಿಂದ ಸಂಜೆ 6:30ಕ್ಕೆ ನೃತ್ಯ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

Related Articles

Back to top button
error: Content is protected !!