ಸಾಂಸ್ಕೃತಿಕ

ಕುಂದಾಪುರದ ಶಿಲ್ಪ ಕಲಾವಿದ ಶ್ರೀತಿನ್ ಶೆಟ್ಟಿಗಾರ್  ರಚಿಸಿದ ಕುವೆಂಪು ಉಬ್ಬು ಶಿಲ್ಪ ಕಲಾಕೃತಿ ಕುಪ್ಪಳ್ಳಿಯಲ್ಲಿ ಅನಾವರಣ

Views: 212

ಕುಂದಾಪುರ:ಸ್ವತಂತ್ರ ಭಾರತದ 2ನೇ ಪ್ರಧಾನಿ  ಲಾಲ್ ಬಹದ್ದೂರ್ ಶಾಸ್ತ್ರೀಜೀಯವರ ಹಾವ, ಭಾವ, ನಡೆ-ನುಡಿಯನ್ನು ನಾನಾ ಮೂಲಗಳಿಂದ ಗೃಹಿಸಿ ಶ್ರೀತಿನ್ ರಚಿಸಿರುವ ಆರು ಅಡಿ ಎತ್ತರದ ಕಂಚಿನ ಪ್ರತಿಮೆ ಕುಂದಾಪುರದಲ್ಲಿ ಕಂಗೊಳಿಸುತ್ತಿದೆ.

ಸೆ.5 ರಂದು ತೀರ್ಥಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ನಿವಾಸದ ಆವರಣದಲ್ಲಿ ವಿಶ್ವಮಾನವ ಸಂದೇಶವುಳ್ಳ ಕಲಾಕೃತಿಯನ್ನು ಕುಂದಾಪುರ ತಾಲೂಕಿನ ಬಂಟ್ವಾಡಿಯ ಕಲಾವಿದ ಶ್ರೀತಿನ್ ಶೆಟ್ಟಿಗಾರ ಅವರು ರಚಿಸಿದ ಉಬ್ಬು ಶಿಲ್ಪ ಕಲಾ ಕೃತಿ ಅನಾವರಣಗೊಳಿಸಲಾಯಿತು.

ಕುಪ್ಪಳ್ಳಿಯ ಕವಿ ಮನೆಗೆ ವಾರ್ಷಿಕ 2 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ.ಕುವೆಂಪು ಅವರ ಆಶಯದಂತೆಯೂ ಫಲಕ ನಿರ್ಮಿಸಲಾಗಿದೆ.

ಈ ಫಲಕವನ್ನು ಗ್ರಾನೈಟ್ ನಲ್ಲಿ ಕೆತ್ತಲಾಗಿದೆ. ಕವಿ ಕುವೆಂಪು ಪರಿಚಯ, ಸಪ್ತ ಸೂತ್ರ, ಪಂಚಮಂತ್ರ, ವಿಶ್ವ ಮಾನವ ಗೀತೆಯನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯಲಾಗಿದೆ. ಇದರಲ್ಲಿ 9 ಅಡಿ ಎತ್ತರದ 4 ಅಡಿ ಅಗಲವಿರುವ ಕುವೆಂಪು ಅವರ ಕಂಚಿನ ಉಬ್ಬು ಕಲಾಕೃತಿ ಮತ್ತು ಫಲಕ ಹೊಂದಿದೆ.

ಕುಪ್ಪಳ್ಳಿಯ ಕವಿ ಮನೆ ಆವರಣದಲ್ಲಿ ನಿರ್ಮಿಸಿರುವ ಕಲಾಕೃತಿಯನ್ನು ಮಾಜಿ ಸಚಿವ, ಶಾಸಕ ಅರಗ ಜ್ಞಾನೇಂದ್ರ ಅನಾವರಣಗೊಳಿಸಿ ಮಾತನಾಡಿ, ‘ಕುವೆಂಪು ಅವರು ಸಾರಿದ ವಿಶ್ವಮಾನವ ಸಂದೇಶ ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದ್ದು, ಅದನ್ನು ಮುಂದಿನ ತಲೆಮಾರಿಗೆ ದಾಟಿಸುವ ಕರ್ತವ್ಯ ತಮ್ಮೆಲ್ಲರದ್ದಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಕುವೆಂಪು ಉಬ್ಬು ಶಿಲ್ಪ ಕಲಾಕೃತಿ ನಿರ್ಮಿಸಿದ ಕುಂದಾಪುರದ  ಶಿಲ್ಪ ಕಲಾವಿದ ಶ್ರೀತಿನ್ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿಎಲ್ ಶಂಕರ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಪ್ರತಿಷ್ಠಾನದ ಸಹ ಕಾರ್ಯದರ್ಶಿ ಕಡಿದಾಳು ಪ್ರಕಾಶ್, ಪ್ರಮುಖರಾದ ಎಮ್ ಸಿ ನರೇಂದ್ರ, ಸಸಿತೋಟ ದಯಾನಂದ, ಡಿ ಎಂ ಮಹದೇವ್ ಕೊಳವಾರ ನಾರಾಯಣ ಮೂರ್ತಿ ಇದ್ದರು.

 

Related Articles

Back to top button
error: Content is protected !!