ಸಾಂಸ್ಕೃತಿಕ

ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಜೂನಿಯರ್ ಎನ್ಟಿಆರ್ ಕುಟುಂಬ:ಸ್ವಾಗತಿಸಿದ ನಟ, ನಿರ್ದೇಶಕ ರಿಷಭ್ ಶೆಟ್ಟಿ

Views: 159

ಉಡುಪಿ: ಉಡುಪಿ ಕೃಷ್ಣಮಠಕ್ಕೆ ತೆಲುಗು ಸೂಪರ್ಸ್ಟಾರ್ ಜೂನಿಯರ್ ಎನ್ಟಿಆರ್ ಇಂದು ತಮ್ಮ ತಾಯಿ ಜೊತೆ ಆಗಮಿಸಿ ಶ್ರೀಕೃಷ್ಣನ ದರ್ಶನ ಪಡೆದರು. ಉಡುಪಿ ಕೃಷ್ಣಮಠಕ್ಕೆ ತಾಯಿ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಆಗಮಿಸಿದ್ದ ಜೂನಿಯರ್ ಎನ್ಟಿಆರ್, ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.

ಉಡುಪಿಗೆ ಆಗಮಿಸಿದ ಜೂನಿಯರ್ ಎನ್ಟಿಆರ್ ರನ್ನು ಕನ್ನಡದ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ ಸ್ವಾಗತಿಸಿದರು.

ಕುಂದಾಪುರ ಮೂಲದವರೇ ಆದ ಜೂನಿಯರ್ ಎನ್ಟಿಆರ್ ತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು ರಿಷಭ್. ಇತ್ತೀಚೆಗಷ್ಟೆ ಜೂನಿಯರ್ ಎನ್ಟಿಆರ್ ಹಾಗೂ ಪ್ರಶಾಂತ್ ನೀಲ್ ಅವರ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿತ್ತು. ಅದೇ ಕಾರಣಕ್ಕೆ ಇಂದು ಕೃಷ್ಣ ಮಠಕ್ಕೆ ಆಗಮಿಸಿದ ಜೂನಿಯರ್ ಎನ್ಟಿಆರ್, ಅವರ ತಾಯಿ ಹಾಗೂ ಪ್ರಶಾಂತ್ ನೀಲ್ ಕೃಷ್ಣನ ದರ್ಶನ ಪಡೆದರು.

Related Articles

Back to top button
error: Content is protected !!