ಕೋಟ ವಿವೇಕ ವಿದ್ಯಾಸಂಸ್ಥೆ : ದ್ವಿತೀಯ ಪಿಯುಸಿ ವಿದ್ಯಾಥಿ೯ಗಳ ಸಾಧನೆ

Views: 0
ಕೋಟ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿವೇಕ ಪ.ಪೂ.ಕಾಲೇಜು ವಿದ್ಯಾರ್ಥಿಗಳು 99.5% ಫಲಿತಾಂಶ ದಾಖಲಿಸಿರುತ್ತಾರೆ. ಒಟ್ಟು ಹಾಜರಾದ 573 ವಿದ್ಯಾರ್ಥಿಗಳಲ್ಲಿ 314 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 236 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 20 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದ ವೈದೇಹಿ ವಿ. ಪೈ ಒಟ್ಟು 588 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು, ಶ್ರೀನಿಧಿ 585 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ರಾಘವೇಂದ್ರ ಅಡಿಗ 584 ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿರುತ್ತಾಳೆ.
ವಾಣಿಜ್ಯ ವಿಭಾಗ ಅಧಿತಿ ವಿ.ಹೊಳ್ಳ 592 ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ನಿಶಾ ವೈಷ್ಣವ್ 591 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಶೆರ್ಲಿ ಲೋಬೋ ಹಾಗು ಶ್ರೀವತ್ಸ ಉಡುಪ 587 ಅಂಕಗಳನ್ನು ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ.
ಕಲಾ ವಿಭಾಗ ಆತ್ಮಿಕ ಶ್ರೀಯಾನ್ 579 ಅಂಕ ಪಡೆದು ಪ್ರಥಮ ಸ್ಥಾನ, ಮಾರಿಸೆಲ್ ಫರ್ನಾಂಡೀಸ್ 570 ಅಂಕ ಪಡೆದು ದ್ವಿತೀಯ ಸ್ಥಾನ ಹಾಗು ಅನನ್ಯ ಕೆ.ಎ. 541 ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ.
ವಿದ್ಯಾ ಸಂಸ್ಥೆಗೆ ಕೀತಿ೯ ತಂದು, ಸಾಧನೆಗೈದ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದರು.