ಶಿಕ್ಷಣ
ಅಪಘಾತದಲ್ಲಿ ನಿಧನ ಹೊಂದಿದ ವಿದ್ಯಾರ್ಥಿ ಮನೆಗೆ ಬೇಟಿ ನೀಡಿ, ಕೊಲ್ಲೂರು ಮೂಕಾಂಬಿಕಾ ಕಾಲೇಜಿನ ವತಿಯಿಂದ ಸಂಗ್ರಹಿಸಿದ ಹಣ ಹಸ್ತಾಂತರ

Views: 112
ಕುಂದಾಪುರ: ಇತ್ತೀಚಿಗೆ ಸಾಗರ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ ಶ್ರೀ ಮೂಕಾಂಬಿಕಾ ದೇವಳದ ಪದವಿಪೂರ್ವ ಕಾಲೇಜಿನ 2023-24 ನೇ ಸಾಲಿನ ವಿದ್ಯಾರ್ಥಿ ಕಟ್ಟಿನಕಾರು ಪಡುಬೀಡಿನ ನಿವಾಸಿ ಸಚಿನ್ ಕೆ ಪಿ ಯವರ ಮನೆಗೆ ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ ಬಿ ಮತ್ತು ವೃಂದದವರು ಭೇಟಿ ನೀಡಿ ಸಾಂತ್ವಾನ ಹೇಳಿದರು.
ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜ ಶಾಸ್ತ್ರ ಉಪನ್ಯಾಸಕ ನಾಗರಾಜ ಅಡಿಗ ನೀಲಾವರ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಪ್ರಥಮ ದರ್ಜೆ ಸಹಾಯಕ ದಿನಕರ್ ಶೆಟ್ಟಿ ಹರ್ಕಾಡಿ ಕಛೇರಿ ಸಹಾಯಕ ಯತೀಶ್ ನೆಂಪು ಹಾಗೂ ವಸತಿ ನಿಲಯದ ಮೇಲ್ವಿಚಾರಕ ಅರುಣ್ ಕೊಠಾರಿ ಉಪಸ್ಥಿತರಿದ್ದರು