ಸಾಂಸ್ಕೃತಿಕ
ಬಾಲ ರಾಮನ ಮೂರ್ತಿ ಕೆತ್ತಿದ ಶಿಲ್ಪಿಗೆ ಅಮೆರಿಕ ವೀಸಾ ನಿರಾಕರಣೆ

Views: 194
ಬೆಂಗಳೂರು: ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿಯನ್ನು ಕೆತ್ತಿದ್ದ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸಿದೆ.
ಅಮೇರಿಕದಲ್ಲಿರುವ ಕನ್ನಡಿಗರು ನಡೆಸುವ 12ನೇ ವಿಶ್ವ ಅಕ್ಕ ಸಮ್ಮೇಳನದ ಮುಖ್ಯ ಅತಿಥಿಯಾಗಿ ಅರುಣ್ ಯೋಗಿರಾಜ್ ಅಮೆರಿಕಕ್ಕೆ ತೆರಳಬೇಕಿತ್ತು. ಈ ಸಂಬಂಧ ಅವರು ವೀಸಾ ಪಡೆಯಲು ಅರ್ಜಿ ಹಾಕಿದ್ದರು. ಈ ವೇಳೆ ಅವರಿಗೆ ಅಮೆರಿಕ ವೀಸಾ ನೀಡಲು ನಿರಾಕರಿಸಿದೆ.
ಅರುಣ್ ಯೋಗಿರಾಜ್ ಅವರ ಪತ್ನಿ ವಿಜೇತಾ ಅಮೆರಿಕಕ್ಕೆ ತೆರಳಿದ್ದಾರೆ. ಆದರೆ ಯಾವ ಕಾರಣಕ್ಕೆ ಅರುಣ್ ಯೋಗಿರಾಜ್ ಅವರಿಗೆ ಅಮೆರಿಕ ವೀಸಾ ನಿರಾಕರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ.






