ಸಾಂಸ್ಕೃತಿಕ

ಬೆಂಗಳೂರು ಕಲಾವಿದರ ಸಂಘದಲ್ಲಿ ನಡೆಯುತ್ತಿದ್ದ ಪೂಜೆ ವೇಳೆ ಹಿರಿಯ ನಟಿ ಮೈ ಮೇಲೆ ಬಂದ ನಾಗ ದೇವರು!

Views: 280

ಬೆಂಗಳೂರು: ಕಲಾವಿದರ ಸಂಘದಲ್ಲಿ ಇಂದು ಕನ್ನಡ ಚಿತ್ರರಂಗದ ಒಳಿತಿಗಾಗಿ ಹೋಮ-ಹವನ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನ ಅಭಿವೃದ್ಧಿ, ಶಾಂತಿ, ನೆಮ್ಮದಿಗಾಗಿ ಗಣ ಹೋಮ, ಆಶ್ಲೇಷಾ ಬಲಿ, ಮೃತ್ಯುಂಜಯ ಹೋಮ, ಸರ್ಪಶಾಂತಿ, ನಾಗದೇವರ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.

ಕಲಾವಿದರ ಸಂಘದಲ್ಲಿ ನಡೆಯುತ್ತಿದ್ದ ಪೂಜೆಯಲ್ಲಿ ನಾಗದರ್ಶನ ನಡೆಸಲಾಗಿದೆ, ಹಿರಿಯ ನಟ ದೊಡ್ಡಣ್ಣ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ನಾಗದರ್ಶಕ ಮಹತ್ವದ ಪ್ರಶ್ನೆಯನ್ನು ಕೇಳಿದೆ.

ಈ ನಾಗದರ್ಶನದ ವೇಳೆ ಹಿರಿಯ ನಟಿ ಜ್ಯೋತಿ ಅವರ ಮೈ ಮೇಲೆ ದೇವರು ಬಂದ ಘಟನೆಯೂ ನಡೆದಿದೆ. ಕೂಡಲೇ ಇತರೆ ಕಲಾವಿದರು ನಟಿ ಜ್ಯೋತಿ ಅವರನ್ನು ಹಿಡಿದುಕೊಂಡಿದ್ದಾರೆ.

ನನಗೆ ಈ ಹಿಂದೆಯೂ ನಾಗದೇವರು ಮೈಮೇಲೆ ಬಂದ ಅನುಭವ ಆಗಿತ್ತು. ದೊಡ್ಡ, ದೊಡ್ಡ ಪೂಜೆ, ಪುನಸ್ಕಾರ ಮಾಡೋ ಸಂದರ್ಭದಲ್ಲಿ ದೇವಿ ಆರಾಧನೆ ಮಾಡೋವಾಗ ನನ್ನ ಮೈಯಲ್ಲಿ ವೈಬ್ರೇಷನ್ ಆಗುತ್ತೆ. ನನ್ನ ಮೇಲೆ ದೇವಿಯ ಅನುಗ್ರಹ ಇದೆ ಅನ್ನೋದನ್ನ ತೋರಿಸಿಕೊಳ್ಳಲು ಈ ರೀತಿಯಾದ ಘಟನೆ ನಡೆಯುತ್ತೆ.

ನಾಗಾರಾಧನೆಯ ಸಮಯದಲ್ಲೂ ನನಗೆ ದೇವರು ಸ್ವಲ್ಪ ಮೈಮೇಲೆ ಬರುತ್ತೆ. ಇವತ್ತೂ ಸಹ ಕಲಾವಿದರ ಸಂಘದಲ್ಲಿ ನಾನಿದ್ದೀನಿ ಅಂತ ತೋರಿಸಿಕೊಳ್ಳಲು ದೇವರು ನನ್ನ ಮೈಮೇಲೆ ಬಂತು. ದೇವರು ಇಲ್ಲಿದ್ದಾರೆ. ಈ ಪೂಜೆಯನ್ನು ಸ್ವೀಕರಿಸಿದ್ದಾರೆ. ನಮ್ಮ ಇಂಡಸ್ಟ್ರಿಗೆ ಒಳ್ಳೆಯದುಗುತ್ತೆ. ಮುಂದೆ ಯಶಸ್ಸು ಸಿಗಲಿದೆ ಎಂದು ಜ್ಯೋತಿ ಹೇಳಿದ್ದಾರೆ.

ದೇವರು ಮೈಮೇಲೆ ಬಂದಾಗ ಸ್ವಲ್ಪ ನಿಮಿಷಗಳ ಕಾಲ ನನಗೇನು ಗೊತ್ತಾಗಲ್ಲ. ಸಡನ್ ಆಗಿ ನನ್ನ ಮೈಮೇಲೆ ಶಕ್ತಿ ಹೆಚ್ಚಾಗುತ್ತೆ. ನಾಲ್ಕೈದು ಜನ ಹಿಡಿದುಕೊಳ್ಳೋದು ಕಷ್ಟವಾಗುತ್ತೆ. ಆಗ ನನಗೆ ಏನಾಗುತ್ತೆ ಅನ್ನೋದು ಗೊತ್ತಾಗಲ್ಲ. ದೇವರ ಅನುಗ್ರಹ ಇರೋದ್ರಿಂದ ಮೈಮೇಲೆ ಬರುತ್ತೆ ಅಂತ ಹೇಳಿದ್ದಾರೆ. ಹೀಗಾಗಿ ನಾನು ಅದನ್ನ ನಂಬಿದ್ದೇನೆ ಎಂದು ತಿಳಿಸಿದ್ದಾರೆ.

Related Articles

Back to top button
error: Content is protected !!