ಸಾಂಸ್ಕೃತಿಕ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್‌ ಸುಧೀರ್-ಸೋನಲ್‌ 

Views: 114

ಬೆಂಗಳೂರು: ಚಂದನವದ ತಾರೆ ಸೋನಲ್‌ ಮಾಂಥರೋ ಹಾಗೂ ಯಶಸ್ವಿ ಚಿತ್ರಗಳ ನಿರ್ದೇಶಕ ತರುಣ್‌ ಸುಧೀರ್‌ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಚಿತ್ರರಂಗ, ರಾಜಕೀಯ ಹಾಗೂ ಅಭಿಮಾನಿಗಳ ಬಳಗವು ಶುಭ ಕೋರಿದೆ.

ನಗರದ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌‍ ಈ ಜೋಡಿಯ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿದ್ದು, ಇಂದು ಬೆಳಗ್ಗೆ 10.50 ರಿಂದ 11.35ರ ವೇಳೆಯಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಎರಡೂ ಕುಟುಂಬದವರು ಹಾಗೂ ಆಪ್ತೇಷ್ಟರು ತರುಣ್‌ ಹಾಗೂ ಸೋನಲ್‌ ವಿವಾಹದಲ್ಲಿ ಪಾಲ್ಗೊಂಡಿದ್ದರು.

ನೆನಪಿರಲಿ ಪ್ರೇಮ್‌ , ಶರಣ್‌ ಹಾಗೂ ತರುಣ್‌ ಸುಧೀರ್‌ ನಡುವೆ ಅಗಾಧವಾದ ಸ್ನೇಹವಿದ್ದು ಇಡೀ ಮದುವೆಯ ಉಸ್ತುವಾರಿಯನ್ನು ಸ್ನೇಹಿತರೇ ವಹಿಸಿಕೊಂಡಿದ್ದರು. ಇಂದು ಬೆಳಗ್ಗೆ ಕಲ್ಯಾಣಮಂಟಪಕ್ಕೆ ವಧು ಆಗಮಿಸುತ್ತಿದ್ದಂತೆ ಸಿನಿಮಾ ರೀತಿಯಲ್ಲಿ ಹೂವುಗಳಿಂದ ರಾಶಿಯಿಂದ ಆಕೆಯನ್ನು ಆಮಂತ್ರಿಸಲಾಯಿತು. ಪಕ್ಕಾ ಸಂಪ್ರದಾಯಿಕ ಉಡುಪಿನಲ್ಲಿ ಸೋನಾಲ್‌ ಹಾಗೂ ತರುಣ್‌ ಕಂಗೊಳಿಸುತ್ತಿದ್ದರು.

ನಟಿ ಸೋನಾಲ್‌ ಮಾಂಥರೋಗೆ ಇಂದು ಡಬ್ಬಲ್‌ ಸಂಭ್ರಮ. ಒಂದೆಡೆ ಇಂದು ಅವರು ತಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, ಇಂತಹ ಶುಭ ಸಂದರ್ಭದಲ್ಲೇ ತರುಣ್‌ ಸುಧೀರ್‌ರೊಂದಿಗೆ ಸಪ್ತಪದಿ ತುಳಿಯುವ ಮೂಲಕ ತಮ ಸಂತಸವನ್ನು ಹೆಚ್ಚಿಸಿ ಕೊಂಡಿದ್ದಾರೆ.

Related Articles

Back to top button
error: Content is protected !!