ಶಿಕ್ಷಣ

ಧರ್ಮಭಗಿನಿ ಮೊನಿಕಾರ ಧಾರ್ಮಿಕ ವೃತ್ತಿಯ ಸುವರ್ಣ ಮಹೋತ್ಸವ 

Views: 0

ಕುಂದಾಪುರ: ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಅನೇಕ ಕಡೆಯ ಪ್ರೌಢಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಅವರು ನಿವೃತ್ತಿಯ ನಂತರ ಕುಂದಾಪುರ ಸಂತ ಜೋಸೆಫ್ ಕಾನ್ವೆಂಟ್ ಮತ್ತು ರೋಜರಿ ಚರ್ಚಿನಲ್ಲಿ ಧಾರ್ಮಿಕ ಸೇವೆ ನೀಡುತ್ತಿರುವ ಧರ್ಮಭಗಿನಿ ಮೊನಿಕಾರ ಧಾರ್ಮಿಕ ದೀಕ್ಷೆಯ ಸುವರ್ಣ ಮಹೋತ್ಸವ ಮತ್ತು 75 ನೇ ಹುಟ್ಟು ಹಬ್ಬವನ್ನು ಹೋಲಿ ರೋಜರಿ ಚರ್ಚಿನಲ್ಲಿ ಆಚರಿಸಲಾಯಿತು.

ಸಹಾಯಕ ಧರ್ಮಗುರು ಅಶ್ವಿನ್ ಆರಾನ್ನಾ ಸಂದೇಶ ನೀಡಿದರು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಕುಂದಾಪುರ ಕಾನ್ವೆಂಟಿನ ಹಿರಿಯ ಭಗಿನಿ ಸಿಸ್ಟರ್ ಆಶಾ, ಕಾರ್ಮೆಲ್ ಸಂಸ್ಥೆಯ ಪ್ರಾಂತೀಯ ಮುಖ್ಯಸ್ಥೆ ಸಿಸ್ಟರ್ ಕ್ಷಮಿತಾ, ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ತಾವ್ರೊ, ಪ್ರಿನ್ಸಿಟಾ ಡಿಸೋಜಾ ಶುಭ ಕೋರಿದರು. ಸಿಸ್ಟರ್ ಮೊನಿಕಾರ, ಎಲ್ಲರಿಗೂ, ಕೃತಜ್ಞತೆ ಸಲ್ಲಿಸಿದರು.ಕೋಟ ಚರ್ಚಿನ ಧರ್ಮಗುರು ವಂ|ಆಲ್ಫೊನ್ಸ್ ಡಿಲೀಮಾ. ಕಟ್ಕೆರೆ ಬಾಲ ಯೇಸುವಿನ ಆಶ್ರಮದ ಧರ್ಮಗುರು ವಂ| ಫ್ರಾನ್ಸಿಸ್ ಡಿಸೋಜಾ, ಮತ್ತು ಉಡುಪಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಭಗಿನಿಯರು, ಕುಂದಾಪುರ ಚರ್ಚಿನವರು ಹಾಜರಿದ್ದರು. ಕುಂದಾಪುರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸಂಗೀತ ಸ್ವಾಗತಿಸಿದರು, ಸಿಸ್ಟರ್ ಪ್ರೇಮಿಕಾ ನಿರೂಪಿಸಿದರು.

Related Articles

Back to top button