ಲಿಟ್ಲ್ ಸ್ಟಾರ್(ವಿದ್ಯಾರಣ್ಯ)ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಯಡಾಡಿ- ಮತ್ಯಾಡಿ: ಕರಾಟೆ ಸ್ಪರ್ಧೆ – ಜಲ್ಲಾ ಮಟ್ಟಕ್ಕೆ ಆಯ್ಕೆ

Views: 267
ಕುಂದಾಪುರ:ಶಾಲಾ ಶಿಕ್ಷಣ& ಸಾಕ್ಷರತಾ ಇಲಾಖೆ ಕುಂದಾಪುರ ಮತ್ತು ಸರ್ಕಾರಿ ಪ್ರೌಢಶಾಲೆ ಬಸ್ರೂರು ಇವರ ಸಹಯೋಗದಲ್ಲಿ ಆಯೋಜಿಸಿದ ಕುಂದಾಪುರ ತಾಲೂಕು ಮಟ್ಟದ ಪ್ರೌಢ ಶಾಲಾ ಮತ್ತು ಪ್ರಾಥಮಿಕ ಶಾಲಾ ಕರಾಟೆ ಸ್ಪರ್ಧೆಯು ಇತ್ತೀಚೆಗೆ ಜರುಗಿತು.
ಪ್ರೌಢ ಶಾಲಾ ವಿಭಾಗದ ಸ್ಪರ್ಧೆಯಲ್ಲಿ ಲಿಟ್ಲ್ ಸ್ಟಾರ್(ವಿದ್ಯಾರಣ್ಯ)ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಯಡಾಡಿ- ಮತ್ಯಾಡಿ ಕುಂದಾಪುರ,ಇಲ್ಲಿನ ಪ್ರತೀಕ್ಷಾ ಪಿ. ಮತ್ತು ಸಾನ್ವಿ ಆಚಾರ್ಯ ಪ್ರಥಮ ಸ್ಥಾನಿಯಾಗಿ,ಪ್ರಕೃತಿ ಪಿ.,ನಯನ ಕೆ.,ಸ್ನೇಹಿಲ್,ಅನಾಸ್ ಮಹಮ್ಮದ್ ದ್ವಿತೀಯ ಸ್ಥಾನಿಗಳಾಗಿ ಹಾಗೂ ಸಂಹಿತಾ ಎಸ್.,ಆರ್ಯ ಶೆಟ್ಟಿ, ಶಾರ್ವಣಿ ಎಸ್.,ಸಾನಿಧ್ಯ ತೃತೀಯ ಸ್ಥಾನಿಯಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ವಿಜೇತರಿಗೆ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀಯುತ ಡಾ. ರಮೇಶ್ ಶೆಟ್ಟಿ,ಕಾರ್ಯದರ್ಶಿ ಗಳಾದ ಶ್ರೀಯುತ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ,ಮುಖ್ಯ ಶಿಕ್ಷಕರಾದ ಶ್ರೀಯುತ ಪ್ರದೀಪ್ ಕೆ.ಮತ್ತು ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಶ್ರೀ ಸೂರ್ಯ, ಶ್ರೀ ಸತೀಶ್ ಕುಮಾರ್,ಶ್ರೀಮತಿ ಜಯಲತಾ ಮಾರ್ಗದರ್ಶನ ನೀಡಿರುತ್ತಾರೆ.