ಆರೋಗ್ಯ
ಗಂಗೊಳ್ಳಿ ; ಉಚಿತ ಅನ್ನಭಾಗ್ಯದ ಅಕ್ಕಿ ಆಕ್ರಮ ಸಾಗಾಟ : ಪೊಲೀಸ್ ವಶಕ್ಕೆ

Views: 212
ಗಂಗೊಳ್ಳಿ: ಗಂಗೊಳ್ಳಿ-ಮುಳ್ಳಿಕಟ್ಟೆ ರಸ್ತೆಯಲ್ಲಿ ಗೂಡ್ಸ್ ವಾಹನದಲ್ಲಿ ಕಾನೂನು ಬಾಹಿರವಾಗಿ ಅಕ್ಕಿ ಸಾಗಿಸುತ್ತಿದ್ದುದನ್ನು ಆಹಾರ ನಿರೀಕ್ಷಕ ಸುರೇಶ ಎಚ್.ಎಸ್. ಹಾಗೂ ಪೊಲೀಸರು ಪತ್ತೆ ಹಚ್ಚಿದ್ದಾರೆ
ಗುಜ್ಜಾಡಿ ಗ್ರಾಮದ ಮಂಕಿ ಕ್ರಾಸ್ ಬಳಿ ವಾಹನ ನಿಲ್ಲಿಸಿದಾಗ 24 ಪಾಲಿಥಿನ್ ಚೀಲಗಳಲ್ಲಿ ಕುಚ್ಚಲಕ್ಕಿ ಹಾಗೂ 4 ಪಾಲಿಥಿನ್ ಚೀಲಗಳಲ್ಲಿ ಬೆಳ್ತಿಗೆ ಅಕ್ಕಿ ಕಂಡುಬಂತು. ಒಟ್ಟು 1,390 ಕೆ.ಜಿ. ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡಲು ತರಲಾಗುತ್ತಿತ್ತು ಎನ್ನಲಾಗಿದೆ.ಅಕ್ಕಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.