ಆರೋಗ್ಯ

ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?..ಯಾರು ಪಡೆಯಬಹುದು?..ಯಾರಿಗೆ ಸಾಧ್ಯವಿಲ್ಲ?

Views: 171

ಕನ್ನಡ ಕರಾವಳಿ ಸುದ್ದಿ:ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಆಯುಷ್ಮಾನ್ ಕಾರ್ಡ್‌ಗಳನ್ನು ಮೊದಲು ಅರ್ಹರಿಗೆ ನೀಡಲಾಗುತ್ತದೆ. ಇದಾದ ಅನಂತರ ಕಾರ್ಡ್‌ದಾರರು 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇಲ್ಲಿ ಗಮನಿಸಿಸಬೇಕಾದ ವಿಚಾರವೆಂದರೆ ಪ್ರತಿ ವರ್ಷ ಕಾರ್ಡುದಾರರು 5 ಲಕ್ಷ ರೂ.ಗಳ ರಕ್ಷಣೆಯನ್ನು ಪಡೆಯುತ್ತಾರೆ. ಅಂದರೆ, ಪ್ರತಿ ವರ್ಷ ಈ ಮೊತ್ತದವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?

ಆಯುಷ್ಮಾನ್ ಕಾರ್ಡ್ ಅನ್ನು ಆಫ್‌ಲೈನ್‌ನಲ್ಲಿ ಪಡೆಯಲು ಬಯಸಿದರೆ ಇದಕ್ಕಾಗಿ ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಬೇಕು. ಇಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಭೇಟಿಯಾಗಿ ಅದನ್ನು ಮಾಡಿಕೊಳ್ಳಬಹುದು.

ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಮಾಡಿಕೊಳ್ಳಬಹುದು. ಇದಕ್ಕಾಗಿ ಈ ಯೋಜನೆಯ ಅಧಿಕೃತ ವೆಬ್‌ಸೈಟ್ https://beneficiary.nha.gov.in/ ಗೆ ಭೇಟಿ ನೀಡಬೇಕು.

ಯಾರು ಪಡೆಯಬಹುದು?

ಕುಟುಂಬದಲ್ಲಿ ಅಂಗವಿಕಲ ವ್ಯಕ್ತಿಯನ್ನು ಹೊಂದಿರುವವರು, ಪರಿಶಿಷ್ಟ ಜಾತಿ ಅಥವಾ ಪಂಗಡದಿಂದ ಬಂದವರು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು, ದಿನಗೂಲಿ ಮಾಡುವವರು, ಬಡತನ ರೇಖೆಗಿಂತ ಕೆಳಗಿರುವವರು, ನಿರ್ಗತಿಕ ಅಥವಾ ಬುಡಕಟ್ಟು ಜನರು ಆಯುಷ್ಮಾನ್ ಕಾರ್ಡ್ ಅನ್ನು ಪಡೆಯಬಹುದು.

ಯಾರಿಗೆ ಸಾಧ್ಯವಿಲ್ಲ?

ತೆರಿಗೆ ಪಾವತಿಸುವವರು, ಸರ್ಕಾರಿ ಕೆಲಸ ಮಾಡುವವರು, ಪಿಎಫ್ ಸದಸ್ಯರಾಗಿರುವವರು, ಇಎಸ್ ಐಸಿಯ ಲಾಭವನ್ನು ಪಡೆಯುವ ಜನರು, ವೈದ್ಯಕೀಯ ವಿಮೆ ಹೊಂದಿರುವವರು ಇದನ್ನು ಪಡೆಯುವುದು ಸಾಧ್ಯವಿಲ್ಲ.

Related Articles

Back to top button