ಸಾಂಸ್ಕೃತಿಕ

ಕುಂದಾಪುರ:ರಾಜ್ಯಮಟ್ಟದ ಸೂಪರ್ ಸಿಂಗರ್ ಸೀಸನ್- 3 :ಧಾರಣಿ .ಕೆ.ಎಸ್  ಪ್ರಥಮ

Views: 121

ಕುಂದಾಪುರ:ನಮ್ಮ ಟಿವಿಯವರು ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸೂಪರ್ ಸಿಂಗರ್ ಸೀಸನ್- 3 ಸಿಂಗಿಂಗ್ ಕಂಟೆಸ್ಟ್ ಇದರಲ್ಲಿ ಧಾರಣಿ ಕೆ ‌‌.ಎಸ್ .ಕುಂದಾಪುರ ವಿಜೇತರಾಗಿ ಟ್ರೋಫಿ ಮತ್ತು ಒಂದು ಲಕ್ಷ ರೂಪಾಯಿ ನಗದು ಪಡೆದಿರುತ್ತಾರೆ.

ಈ ಸಾಧನೆಗೆ ತೀರ್ಪುಗಾರರಾಗಿ ಖ್ಯಾತ ಸಂಗೀತ ನಿರ್ದೇಶಕರಾದ ಗುರುಕಿರಣ, ವಿ ಮನೋಹರ್, ಮಣಿಕಾಂತ್ ಕದ್ರಿ ಮತ್ತು ಗಿಟರ್ ಕಲಾವಿದ ರಾಜ್ ಗೋಪಾಲ್ ಅವರು ಭಾಗವಹಿಸಿದ್ದರು.

ಸುಮಾರು 200 ಕ್ಕಿಂತಲೂ ಹೆಚ್ಚು ಸ್ಪರ್ಧಿಗಳನ್ನು ರಾಜ್ಯದಲ್ಲಡೆಯಿಂದ ಭಾಗವಹಿಸಿದ್ದರು.

ಅಂತಿಮವಾಗಿ ಎಂಟು ಜನ ಫೈನಲ್ ನಲ್ಲಿ ನಡೆದ ಸ್ಪರ್ಧೆಗಳಲ್ಲಿ  ದಾರಿಣಿ. ಕೆ. ಎಸ್ ಕುಂದಾಪುರ ಪ್ರಥಮ ಸ್ಥಾನಿಯಾಗಿದ್ದಾರೆ.

ಇವರು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ದೈಹಿಕ ನಿರ್ದೇಶಕ ಶಂಕರನಾರಾಯಣ ಮತ್ತು ಶ್ರೀಮತಿ ವತ್ಸಲ ದಂಪತಿ ಇವರ ಪುತ್ರಿಯಾಗಿದ್ದಾರೆ.

Related Articles

Back to top button
error: Content is protected !!