ಗ್ರಾಹಕರೇ ಎಚ್ಚರ..! ಅಮುಲ್ ಮಜ್ಜಿಗೆ ಪ್ಯಾಕ್‌ನಲ್ಲಿ ಜೀವಂತ ಹುಳುಗಳು ಪತ್ತೆ..ಸಕತ್ ವೈರಲ್..!

Views: 161
ನವದೆಹಲಿ, : ಆನ್‌ಲೈನ್‌ನಲ್ಲಿ ಅಮುಲ್ ಮಜ್ಜಿಗೆ ಆರ್ಡರ್ ಮಾಡಿದ್ದ ವ್ಯಕ್ತಿಯೊಬ್ಬರಿಗೆ ಜೀವಂತ ಹುಳುಗಳಿಂದ ತುಂಬಿದ್ದ ಬಾಕ್ಸ್ ಬಂದಿದೆ. ಇದು ಆಹಾರ ಸೇವಾ ಉದ್ಯಮದ ಬಗ್ಗೆ ಆತಂಕ ಮೂಡಿಸಿದೆ.
ಆನ್‌ಲೈನ್ ಅಪ್ಲಿಕೇಷನ್ ಬಳಕೆದಾರ ಗಜೇಂದರ್ ಯಾದವ್ ಎನ್ನುವವರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಅಮುಲ್ ಹೈ-ಪ್ರೋಟೀನ್ ಮಜ್ಜಿಗೆಯ ಪೆಟ್ಟಿಗೆಯಲ್ಲಿ ಜೀವಂತ ಹುಳುಗಳು ಇರುವುದನ್ನು ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋ, ವಿಡಿಯೋಗಳು ಸಕತ್ ವೈರಲ್ ಆಗುತ್ತಿವೆ.
“ಅಮುಲ್ ವೆಬ್‌ಸೈಟ್‌ನಿಂದ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸಿ. ಹೇ ಅಮುಲ್ ನೀವು ನಮಗೆ ನಿಮ್ಮ ಹೆಚ್ಚಿನ ಪ್ರೊಟೀನ್ ಮಜ್ಜಿಗೆ ಜೊತೆಗೆ ಹುಳಗಳನ್ನು ಸಹ ಕಳುಹಿಸಿದ್ದೀರಿ. ನಾನು ಇತ್ತೀಚೆಗೆ ಖರೀದಿಸಿದ ಮಜ್ಜಿಗೆಯಲ್ಲಿ ಹುಳುಗಳು ಪತ್ತೆಯಾಗಿವೆ ಎಂದು ಗಜೇಂದರ್ ಯಾದವ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ಬಾಕ್ಸ್ ಮೇಲೆ ಬಿಳಿ ಹುಳುಗಳು ಹರಿದಾಡುತ್ತಿರುವುದನ್ನು ನೋಡಬಹುದು. ಇದರ ಜೊತೆಗೆ ಹಾಳಾಗಿರು ಮಜ್ಜಿಗೆ ಕೂಡ ಇದರಲ್ಲಿದೆ. “ಬಹುತೇಕ ಅರ್ಧದಷ್ಟು ಪ್ಯಾಕೆಟ್‌ಗಳು ತೆರೆದಿವೆ ಅಥವಾ ಹರಿದಿವೆ. ಮಜ್ಜಿಗೆ ಈಗಾಗಲೇ ಕೊಳೆತಿದೆ. ಮಜ್ಜಿಗೆಯಿಂದ ಅತ್ಯಂತ ಕೆಟ್ಟ ವಾಸನೆ ಬರುತ್ತಿದೆ” ಎಂದು ಗಜೇಂದರ್ ಯಾದವ್ ಮುಂದಿನ ಪೋಸ್ಟ್‌ನಲ್ಲಿ ಬರೆದು ಅಮುಲ್‌ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದರ ಜೊತೆಗೆ ಅಮುಲ್‌ಗೆ ಕಳುಹಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಸಹ ಪೋಸ್ಟ್ ಮಾಡಿದರು, ಅವರು ಪರೀಕ್ಷೆಗಾಗಿ ಈ ಸಾಕ್ಷಿಗಳನ್ನು ಸಂಗ್ರಹಿಸಬೇಕೆಂದು ಒತ್ತಾಯಿಸಿದ್ದಾರೆ. ಇದಾದ ಬಳಿಕ ಅಮುಲ್ ಕಂಪನಿ ಕ್ಷಮೆಯಾಚಿಸಿದೆ ಎಂದು ಉಲ್ಲೇಖಿಸಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ಯಾರನ್ನಾದರೂ ಕಳುಹಿಸುತ್ತಿದೆ ಮತ್ತು ಮರುಪಾವತಿ ಮಾಡುವ ಭರವಸೆ ನೀಡಿದೆ.