ಶಿಕ್ಷಣ
ದ್ವಿತೀಯ ಪಿಯುಸಿ ಪರೀಕ್ಷೆ-3 ಫಲಿತಾಂಶ ಪ್ರಕಟ: ಬಾಲಕಿಯರೇ ಮೇಲುಗೈ

Views: 33
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇಂದು ದ್ವಿತೀಯ ಪಿಯುಸಿ ಪರೀಕ್ಷೆ- 3ರ ಫಲಿತಾಂಶ ಪ್ರಕಟಣೆ ಮಾಡಿದೆ.
ಜೂನ್ 25 ರಿಂದ ಜುಲೈ 5ರವರೆಗೆ ಈ ಪರೀಕ್ಷೆ- 3 ನಡೆಸಲಾಗಿತ್ತು. ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ-3ರ ಪರೀಕ್ಷೆಯಲ್ಲಿ ಒಟ್ಟು 76,005 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಜೂ.25ರಿಂದ ಜು.5 ರವರೆಗೆ ಅಂದರೆ 10 ದಿನಗಳ ಕಾಲ ನಡೆಸಲಾಗಿದ್ದ ಈ ಪರೀಕ್ಷೆಗೆ 75,466 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 17,911 ವಿದ್ಯಾರ್ಥಿಗಳು ಸದ್ಯ ಪಾಸ್ ಆಗಿದ್ದಾರೆ. ಶೇಕಡಾ 21.65 ಬಾಲಕರು ಉತ್ತೀರ್ಣರಾಗಿದ್ದಾರೆ. ಶೇಕಡಾ 26.55 ರಷ್ಟು ಬಾಲಕಿಯರು ಉತೀರ್ಣರಾಗಿದ್ದಾರೆ.