ಶಿಕ್ಷಣ

ಕೋಟೇಶ್ವರ: ಕಾಲೇಜು ವಿದ್ಯಾರ್ಥಿಗಳಿಂದ ದ್ವಿಚಕ್ರ ವಾಹನ ನಿಲುಗಡೆಯ ಶೆಡ್ ಕೊಡುಗೆ

Views: 65

ಕೋಟೇಶ್ವರ:ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರ ಕುಂದಾಪುರ ಉಡುಪಿ ಜಿಲ್ಲೆ ಇಲ್ಲಿನ 2023-24 ನೇ ಶೈಕ್ಷಣಿಕ ವರ್ಷದ ಅಂತಿಮ ಪದವಿ ವಿದ್ಯಾರ್ಥಿಗಳು ಕಾಲೇಜಿನ ವಿದ್ಯಾರ್ಥಿಗಳ ಉಪಯೋಗಕ್ಕೆ ದ್ವಿಚಕ್ರ ವಾಹನ ನಿಲುಗಡೆಯ ಶೆಡ್‌ನ್ನು ಅಂದಾಜು ರೂ. 50000/- ವೆಚ್ಚದಲ್ಲಿ ನಿರ್ಮಿಸಿ ಕಾಲೇಜಿಗೆ ಕೊಡುಗೆ ನೀಡಿರುತ್ತಾರೆ.

ತಾವು ಮೂರು ವರ್ಷಗಳವರೆಗೆ ವಿದ್ಯಾಭ್ಯಾಸ ಮಾಡಿದ ಸಂಸ್ಥೆಗೆ ತಮ್ಮ ನೆನಪನ್ನು ಸ್ಮರಣೀಯಗೊಳಿಸುವ ಭಾವನಾತ್ಮಕ ಸಂದರ್ಭವನ್ನು ಬೆಸೆಯುವ ಉದ್ದೇಶವನ್ನು ಹೊತ್ತು ನೀಡಿರುವ ವಿದ್ಯಾರ್ಥಿಗಳ ಈ ಕೊಡುಗೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್. ನಾಯಕ ಹಾಗೂ ಬೋಧಕ-ಬೋಧಕೇತರ ಸಿಬ್ಬಂಧಿ ವರ್ಗ ಅತ್ಯಂತ ಮುಕ್ತ ಮನಸ್ಸಿನಿಂದ ಪ್ರಶಂಸಿಸಿದ್ದಾರೆ ಹಾಗೂ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದ್ದಾರೆ.

Related Articles

Back to top button
error: Content is protected !!