ಶಿಕ್ಷಣ
ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆ ಕಿಂಡರ್ ಗಾರ್ಡನ್ ಮಕ್ಕಳ “ಗುಲಾಬಿ ಬಣ್ಣದ ದಿನ” ಮತ್ತು “ಹೂವಿನ ದಿನ” ಆಚರಣೆ
Views: 20
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದ ಆಂಗ್ಲ ಮಾಧ್ಯಮ ಶಾಲೆ ಕಿಂಡರ್ ಗಾರ್ಡನ್ ಮಕ್ಕಳ “ಗುಲಾಬಿ ಬಣ್ಣದ ದಿನ” ಮತ್ತು “ಹೂವಿನ ದಿನ”ವನ್ನು ದಿನಾಂಕ 24.03.2026ರಂದು ಮಂಗಳವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳು ಗುಲಾಬಿ ಬಣ್ಣದ ಉಡುಪನ್ನು ಧರಿಸಿ ವಿವಿಧ ಬಗೆಯ ಹೂಗಳನ್ನು ತಂದಿದ್ದರು.
ಮಕ್ಕಳು ತಮ್ಮೊಂದಿಗೆ ತಂದಿದ್ದ ಗುಲಾಬಿ ಬಣ್ಣದ ಆಟಿಕೆಗಳನ್ನು ಮತ್ತು ಹೂಗಳನ್ನು ಅಲಂಕರಿಸಲಾಯಿತು. ಮಕ್ಕಳು ತಾವು ತಂದಿರುವ ಹೂಗಳನ್ನು ಗುರುತಿಸಿ ಅದರ ಬಣ್ಣ ಮತ್ತು ಅದರ ಉಪಯೋಗಗಳ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ತರಬೇತುದಾರ ರಾದ ಶ್ರೀ ಪ್ರದೀಪ್ ಕುಮಾರ್ ಹಾಗೂ ಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ ವನಿತಾ ಅವರು ಉಪಸ್ಥಿತರಿದ್ದರು.






