ಶಿಕ್ಷಣ
ಕೋಟ ವಿವೇಕ ಪದವಿಪೂರ್ವ ಕಾಲೇಜು :ವಿಜ್ಞಾನ ಸಂಘ ‘ವಿಶನ್’ ಉದ್ಘಾಟನಾ ಸಮಾರಂಭ

Views: 49
ಕೋಟ : ವಿವೇಕ ಪದವಿಪೂರ್ವ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ವಿಜ್ಞಾನ ಸಂಘ ‘ವಿಶನ್’ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.
ಉದ್ಘಾಟಕರಾಗಿ ಡಾ.ರವಿಪ್ರಕಾಶ್ ವೈ., ಅಸೋಸಿಯೇಟ್ ಡೈರೆಕ್ಟರ್ ಫಾರ್ ಅಕಾಡೆಮಿಕ್ಸ್, ಎಂ.ಐ.ಟಿ. ಮಣಿಪಾಲ ಇವರು ಆಗಮಿಸಿ ಎನ್ನುವ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಪ್ರಸೆಂಟೇಶನ್ ಮೂಲಕ ವಿವರಿಸುತ್ತಾ ವಿಜ್ಞಾನದ ವಿಷಯಗಳನ್ನು ಹೇಗೆ ಅಧ್ಯಯನ ಮಾಡಿ ಅರ್ಥ ಮಾಡಿಕೊಳ್ಳಬೇಕು ಎನ್ನುವುದನ್ನು ತಿಳಿಸಿ, ವಿಜ್ಞಾನದಲ್ಲಿರುವ ಜೀವನ ಮೌಲ್ಯಗಳನ್ನು ವಿವರಿಸಿದರು.
ಒಂದು ಸಮಸ್ಯೆಗೆ ಹಲವಾರು ಪರಿಹಾರಗಳು ಇರುತ್ತವೆ. ಅದರ ಕುರಿತಾಗಿ ಚಿಂತಿಸಬೇಕೇ ಹೊರತು ಯಾವುದೇ ಕಾರಣಕ್ಕೂ ಅಧೀರರಾಗಬಾರದು ಎಂದು ಭೌತಶಾಸ್ತ್ರ ಪ್ರಯೋಗದ ಮೂಲಕ ಪ್ರಸ್ತುತ ಪಡಿಸಿದರು.
ಪ್ರಾಂಶುಪಾಲರಾದ ಜಗದೀಶ ನಾವಡ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಯೋಜಕರಾದ ರವಿ ಕಾರಂತ್ ಧನ್ಯವಾದವನ್ನಿತ್ತರು. ಉಪನ್ಯಾಸಕರಾದ ವಾಗೀಶ್ ಕಾರ್ಯಕ್ರಮ ನಿರೂಪಿಸಿದರು.