ಕರಾವಳಿ
ಪರ್ಕಳ:ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿದ ಬಸ್

Views: 120
ಉಡುಪಿ: ಮಣಿಪಾಲದಿಂದ ಹೆರ್ಗದತ್ತ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿ ತೋಡಿಗೆ ಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಚಾಲಕನಿಗೆ ಮೂರ್ಛೆ ಬಂದಿದ್ದು, ಅವರು ಸ್ಟೇರಿಂಗ್ ಬಿಟ್ಟಿದ್ದಾರೆ. ಈ ವೇಳೆ ಬಸ್ ಹಿಮ್ಮುಖವಾಗಿ ಚಲಿಸಿದೆ. ಕೂಡಲೇ ಬಸ್ಸಿನಲ್ಲಿದ್ದ ಪ್ರಯಾಣಿಕರು ಕೆಳಕ್ಕೆ ಹಾರಲು ಯತ್ನಿಸಿದ್ದಾರೆ. ಬಸ್ ತೋಡಿಗೆ ಬಿದ್ದು ಅಲ್ಲೇ ನಿಂತಿದೆ. ಸ್ವಲ್ಪ ಹಿಂದಕ್ಕೆ ತೆರಳುತ್ತಿದ್ದರೆ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆಯುವ ಸಾಧ್ಯತೆಯಿತ್ತು. ಬಸ್ಸಿನಲ್ಲಿ 30-40 ಮಂದಿ ಪ್ರಯಾಣಿಕರು ಇದ್ದರು. ಚಾಲಕನನ್ನು ಕೂಡಲೇ ಮಣಿಪಾಲದ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ.ಪ್ರಯಾಣಿಕರು ಮತ್ತೊಂದು ಬಸ್ಸಿನಲ್ಲಿ ತೆರಳಿದ್ದಾರೆ.






