ಕರಾವಳಿ

ಕುಂದಾಪುರ: ತೋಟಕ್ಕೆ ತೆರಳಿದ ಕೃಷಿಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವು 

Views: 330

ಕುಂದಾಪುರ : ತೋಟಕ್ಕೆ ತೆರಳಿದ ಕೃಷಿಕ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಜೂ.25ರಂದು ನಡೆದಿದೆ.

ಹಾಲಾಡಿ ಗ್ರಾಮದ ಶೇಖರ ಶೆಟ್ಟಿ (74) ಮೃತಪಟ್ಟವರು.

ಅಡಿಕೆ ತೋಟಕ್ಕೆಂದು ತೆರಳಿದವರು ಮನೆಯ  ಹಿಂಬದಿಯಲ್ಲಿದ್ದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ.

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದ ಅವರ ನಿಧನಕ್ಕೆ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಇನ್ನಿತರ ಗಣ್ಯರು ಬೇಟಿ  ನೀಡಿ ಸಂತಾಪ ಸೂಚಿಸಿದರು. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!