ನಿದ್ರೆ ವೇಳೆ ಗೊರಕೆಗೆ ಕಾರಣವೇನು?

Views: 113
ಗೊರಕೆಯು ನಿದ್ರೆ ಸಂಬಂಧಿ ಉಸಿರಾಟದ ಅಸ್ವಸ್ಥತೆಯಾಗಿದ್ದು, ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನೀಯಾದೊಂದಿಗೆ (ಒಎಸ್ಎ) ಕೂಡ ಸಂಬಂಧ ಹೊಂದಿದೆ. ಇಂದು 12 ಕೋಟಿಗಿಂತ ಹೆಚ್ಚು ಜನರು ಈ ಒಎಸ್ಎ ಯಿಂದ ಬಳಲುತ್ತಿದ್ದಾರೆ.ಗೊರಕೆ ಎಂಬುದು ನಿದ್ರೆಯ ಅಸ್ವಸ್ಥತೆಯಾಗಿದ್ದು, ಇದು ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ ಮತ್ತು ಪಾರ್ಶ್ವವಾಯುನಂತಹ ಅನೇಕ ಸಾಂಕ್ರಾಮಿಕೇತರ ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಗೊರಕೆಯೆಂಬುದು ನಿದ್ರೆ ಸಮಯದಲ್ಲಿ ಉಸಿರಾಡುವಾಗ ಉಸಿರೆಳೆಯುವ ಸಂದರ್ಭದಲ್ಲಿ ಉಂಟಾಗುವ ವ್ಯತ್ಯಾಸವಾಗಿದೆ. ಇದನ್ನು ಅಪ್ನೀಯಸ್ ಅಥವಾ ಹೈಪೊಪ್ನೀಸ್ ಎಂದು ಕರೆಯಲಾಗುವುದು
ಎಲ್ಲಾ ಗೊರಕೆಗಳು ಅಪಾಯಕಾರಿಯಾಗಿರುವುದಿಲ್ಲ. ವ್ಯಕ್ತಿಯೊಬ್ಬ ಬೆಳಗಿನ ಸಮಯದಲ್ಲಿ ಅಧಿಕ ನಿದ್ರೆ ಸಮಯದ ಬಳಲಿಕೆ ಮೇಲೆ ಇದರ ಕುರಿತು ಕಾಳಜಿ ವಹಿಸಬೇಕಿದೆ. ಬೆಳಗಿನ ಹೊತ್ತಿನ ಅಧಿಕ ನಿದ್ರೆಯ ಪ್ರಮುಖ ಲಕ್ಷಣ ಎಂದರೆ, ರೋಗಿ ಬೆಳಗಿನ ಅವಧಿಯಲ್ಲಿ ಟಿವಿ ನೋಡುತ್ತಾ, ಪೇಪರ್ ಓದುತ್ತಾ ಮತ್ತು ಕಾರು- ಬೈಕ್ ಚಾಲನೆ ಮಾಡುವಾಗಲೇ ಸುಲಭವಾಗಿ ನಿದ್ರೆಗೆ ಜಾರುವುದಾಗಿದೆ. ಇದು ಅಪಾಯಕಾರಿಯಾಗಿದೆ ಎನ್ನುತ್ತಾರೆ ವೈದ್ಯರು.
ಇದು ಬೆಳಗಿನ ಸಮಯದ ತಲೆನೋವು, ನಿದ್ರಾಹೀನತೆ, ಏಕಾಗ್ರತೆ ಕೊರತೆ, ಮನಸ್ಥಿತಿ ಬದಲಾವಣೆ, ಪದೇ ಪದೇ ಮೂತ್ರ ವಿಸರ್ಜನೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ.
ಈ ರೀತಿಯ ಅಡೆತಡೆಗಳು ಗಂಭೀರವಾದಲ್ಲಿ, ದೇಹದ ಅನೇಕ ಅಂಗಾಂಗಗಳಿಗೆ ಆಮ್ಲಜನಕದ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ. ಇದು ಅಪ್ನೀಯಾಗೆ ಕಾರಣವಾಗುತ್ತದೆ. ಅಂಗಾಂಗಳಿಗೆ ಆಮ್ಲಜನಕ ಕೊರತೆಯಾಗುವುದರಿಂದ ಸುಸ್ತು, ಬೆಳಗಿನ ಹೊತ್ತು ನಿದ್ರೆ, ಕಿರಿಕಿರಿಯಂತಹ ಲಕ್ಷಣಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಮಸ್ಯೆಗಳು ವಿಚ್ಛೇದನ, ರಸ್ತೆ ಅಪಘಾತ ಮತ್ತು ಮಾನಸಿಕ ಮತ್ತು ದೈಹಿಕ ಆರೋಗ್ಯ ಸಂಬಂಧಿತ ಸಮಸ್ಯೆಗೆ ಕಾರಣವಾಗುತ್ತದೆ. ಇದು ಮಧುಮೇಹ, ಅನಿಯಮಿತ ಹೃದಯ ಬಡಿತ, ಹೃದಯಾಘಾತ, ಹಠಾತ್ ಹೃದಯಾಘಾತ, ಪಾರ್ಶ್ವವಾಯು, ಡೆಮನ್ಶಿಯಾ ಮತ್ತು ಖಿನ್ನತೆಗೆ ಕಾರಣವಾಗಬಹುದು.
ಈ ಸಮಸ್ಯೆ ಹೆಚ್ಚಾಗಿ ಸ್ಥೂಲಕಾಯ ಹೊಂದಿರುವವರಲ್ಲಿ, ವಂಶವಾಹಿನಿ ಹೊಂದಿರುವ ಜನರಲ್ಲಿ ಹೆಚ್ಚಿದೆ.ಜೀವನಶೈಲಿ ಬದಲಾವಣೆ, ತೂಕ ಇಳಿಕೆ, ನಿಯಮಿತ ವ್ಯಾಯಾಮ, ರಾತ್ರಿ ಕಡಿಮೆ ಆಹಾರ ಸೇವನೆ, ನಿದ್ರೆ ಮಾತ್ರೆ ತಪ್ಪಿಸುವಿಕೆ, ಧೂಮಪಾನದಿಂದ ದೂರವಿರುವುದು ಅವಶ್ಯ