ಕುಂದಾಪುರ:ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲು

Views: 337
ಕುಂದಾಪುರ: ಇಲ್ಲಿನ ಸರಕಾರಿ ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ| ರಾಬರ್ಟ್ ರೆಬೆಲ್ಲೋ ವಿರುದ್ಧ ವೈದ್ಯೆಗೆ ಮಾನಸಿಕ, ಲೈಂಗಿಕ ಹಾಗೂ ವೈಯಕ್ತಿಕ ಚಾರಿತ್ರ್ಯವಧೆ ಮಾಡಿ, ಬೆದರಿಕೆ ಹಾಕಿದ ಕುರಿತು ನ್ಯಾಯ ಕೊಡಿಸುವಂತೆ ವೈದ್ಯೆ ದೂರು ನೀಡಿದ್ದಾರೆ.
ಕರ್ತವ್ಯ ನಂತರ ರಾತ್ರಿ ಮೊಬೈಲ್ ಗೆ ಮೆಸೇಜ್ ಮಾಡಿ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡಿರುತ್ತಾರೆ. ಕರ್ತವ್ಯಕ್ಕೆ ಸೇರಿದ ವೈದ್ಯೆಗೆ ಕಳೆದ 8 ತಿಂಗಳಿನಿಂದ ವಾಟ್ಸಾಪ್‌ನಲ್ಲಿ ತಡರಾತ್ರಿ ನಿರಂತರ ಅಶ್ಲೀಲ ಮೆಸೇಜ್ ಮಾಡುತ್ತಾ, ಸ್ಟೇಟಸ್‌ನ ಫೋಟೊಗಳನ್ನು ಸೇವ್ ಮಾಡಿ ಅದಕ್ಕೆ ಅಶ್ಲೀಲ ಮೆಸೇಜ್ ಕಳುಹಿಸಿ, ದುಬಾರಿ ಹೊಟೇಲ್‌ಗೆ ಕರೆದೊಯ್ಯುತ್ತೇನೆ ಎಂದಿದ್ದಾರೆ.
ಪ್ರಭಾವಿ ವ್ಯಕ್ತಿಗಳ ಜೊತೆ, ರಾಜಕಾರಣಿಗಳ ಜೊತೆ ಇರುವ ಫೋಟೊಗಳನ್ನು ಕಳುಹಿಸುತ್ತಿದ್ದರು. ವಿದೇಶದಲ್ಲಿ ಹೊಟೇಲ್‌ನಲ್ಲಿ ಬೇರೆ ಬೇರೆ ಹೆಣ್ಣು ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ ಫೋಟೊಗಳನ್ನು ಕಳುಹಿಸಿ ನೀನು ಬಾ ಎಂದು ಸತಾಯಿಸುತ್ತಿದ್ದಾರೆ.
ಹೊಸದಾಗಿ ಸೇರಿದ ವೈದ್ಯೆ ಉದ್ಯೋಗ ಉಳಿಸಿಕೊಳ್ಳುವ ಸಲುವಾಗಿ ಮಾನಕ್ಕೆ ಹೆದರಿ ಸುಮ್ಮನಿದ್ದರೂ, ಅವರ ಮೇಲೆ ಬೇರೆ ವೈದ್ಯರು, ಸಿಬಂದಿ ಜತೆ ಸಂಭಾಷಣೆ ನಡೆಸಿದ್ದಕ್ಕೆ ಕೆಟ್ಟಪದ ಪ್ರಯೋಗ ಮಾಡಿ ಸುಳ್ಳು ಅಪವಾದ ಹೇರಿ ನನ್ನ ತಲೆಗೆ ಕಟ್ಟಿದ್ದಾರೆ ಎಂದು ದೂರು ನೀಡಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ತಹಶೀಲ್ದಾರ್ ತನಿಖೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಮಾಡಿದ್ದಾರೆ.
ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ
ವೈದ್ಯರ ಮೇಲೆ ಸಾರ್ವಜನಿಕರಿಂದ ಹಾಗೂ ಸಹ ಸಿಬಂದಿ, ವೈದ್ಯರಿಂದ ದೂರು ಬಂದ ಹಿನ್ನೆಲೆಯಲ್ಲಿ ನಡೆದ ತನಿಖೆ ಆಧಾರದಲ್ಲಿ ಹಾಗೂ ಲೈಂಗಿಕ ದೌರ್ಜನ್ಯ ಕೇಸು ದಾಖಲಾದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.