ಶಿಕ್ಷಣ

ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್ ಎಸ್ ಎಲ್ ಸಿ ಶೇಕಡ 100 ಫಲಿತಾಂಶ

Views: 44

ಉಡುಪಿ :ಇಲ್ಲಿನ ಅದಮಾರು ಪೂರ್ಣಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು 2023-24ನೇ ಸಾಲಿನ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. 

ಪರೀಕ್ಷೆಗೆ ಹಾಜರಾದ 49 ಎಲ್ಲರೂ ಉತ್ತೀರ್ಣರಾಗಿದ್ದು, 21 ಮಂದಿ ವಿಶಿಷ್ಟ ಶ್ರೇಣಿ, 23 ಪ್ರಥಮ ದರ್ಜೆ, ನಾಲ್ಕು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕೃತಿ ಜಿ- 614, ಅಂಕಿತಾ ಭಟ್ – 612, ತೋಷಿತ್ ಶೆಟ್ಟಿ – 611, ಭವಿಷ್ – 610, ಅನ್ವಿತಾ ಎಸ್.‌ ಭಟ್‌ – 598 ಅಂಕಗಳಿಸಿರುತ್ತಾರೆ.

ಉತ್ತಮ ಫಲಿತಾಂಶ ದಾಖಲಾಗಿ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ, ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಧರ್ ಕೆ ರಾಸವ್, ಸಂಸ್ಥೆಯ ಕೋಶಾಧಿಕಾರಿ ಗಣೇಶ ಹೆಬ್ಬಾರ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಯಾದ ಪ್ರೊ. ನಿತ್ಯಾನಂದ (ರಾಜ್ಯ ಶಾಸ್ತ್ರ ಹಿರಿಯ ಉಪನ್ಯಾಸಕ) ಕಾಲೇಜಿನ ಪ್ರಾಂಶುಪಾಲರಾದ ಸಂಜೀವ್ ನಾಯಕ್, ಆಂಗ್ಲ ಮಾಧ್ಯಮ ಪ್ರೌಢಶಾಲೆಯ ನೂತನ ಮುಖ್ಯೋಪಾಧ್ಯಾಯರಾದ ಮಂಜುನಾಥ ಎ ವಿ, ನಿರ್ಗಮಿತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಕ್ಷ್ಮೀ ನಾಯಕ್ ರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Related Articles

Back to top button
error: Content is protected !!