ಜೈಲು ಪಾಲಾದ ರೇವಣ್ಣ..ಕೋರ್ಟ್ನಲ್ಲಿ ಗಳಗಳನೇ ಅತ್ತು , ಜಡ್ಜ್ ಮುಂದೆ ಹೇಳಿದ್ದೇನು?

Views: 109
ಬೆಂಗಳೂರು: ಪ್ರಕರಣದ ಪ್ರಮುಖ ಆರೋಪಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ಇನ್ನೊಂದೆಡೆ ಸಂತ್ರಸ್ತೆ ಕಿಡ್ನ್ಯಾಪ್ ಕೇಸಲ್ಲಿ ಮಾಜಿ ಸಚಿವ ಎಚ್.ಡಿ ರೇವಣ್ಣ ಜೈಲು ಸೇರಿದ್ದಾರೆ. ಇಂದು ಕೆ.ಆರ್ ನಗರದ ಸಂತ್ರಸ್ತೆ ಕಿಡ್ನ್ಯಾಪ್ ಕೇಸಲ್ಲಿ ಈ ವಾದ ಆಲಿಸಿದ ನ್ಯಾಯಾಧೀಶರು ಹೆಚ್.ಡಿ ರೇವಣ್ಣ ಅವರಿಗೆ 7 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ಮಹತ್ವದ ಆದೇಶ ನೀಡಿದೆ. ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ನೀಡಿದ್ದು, ಇಂದಿನಿಂದ 7 ದಿನ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 17ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಜಡ್ಜ್ ಮುಂದೆ ಎಚ್.ಡಿ ರೇವಣ್ಣ ಹೇಳಿದ್ದೇನು?
ಇನ್ನು, ಕೋರ್ಟ್ನಲ್ಲಿ ಜಡ್ಜ್ ಕೇಳಿದ ಪ್ರಶ್ನೆಗೆ ಮಾಜಿ ಸಚಿವ ಎಚ್.ಡಿ ರೇವಣ್ಣ ಉತ್ತರ ಹೀಗಿತ್ತು. ನಾನು ಮೂರು ದಿನಗಳಿಂದ ನಿದ್ದೆ ಮಾಡಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ, ಎಸ್ಐಟಿ ಸರಿಯಾಗಿ ಸ್ಪಂದಿಸಿಲ್ಲ. ನಾನು ಎಲ್ಲೂ ಹೋಗಿರಲಿಲ್ಲ. ನಮ್ಮ ತಂದೆ ಮನೆಯಲ್ಲೇ ಇದ್ದೆ. ನನಗೆ ಈ ಕೇಸ್ ಬಗ್ಗೆ ಏನು ಗೊತ್ತೇ ಇಲ್ಲ. ನನಗೆ ಟ್ರೀಟ್ಮೆಂಟ್ ಅಗತ್ಯ ಇದೆ ಎಂದಿದ್ದಾರೆ ರೇವಣ್ಣ.
ಇನ್ನು, ಟ್ರೀಟ್ಮೆಂಟ್ ಆಯ್ತಾ? ಅನ್ನೋ ಜಡ್ಜ್ ಪ್ರಶ್ನೆಗೆ ಉತ್ತರ ನೀಡಿದ ರೇವಣ್ಣ, ಇವತ್ತು ವೈದ್ಯರು ಕರೆದಿದ್ದಾರೆ. ನಿನ್ನೆ ಆಗಿದೆ, ಇಂದು ಟ್ರೀಟ್ಮೆಂಟ್ ಇದೆ. ನನ್ನದು ತಪ್ಪೇನಿಲ್ಲ, ದಯವಿಟ್ಟು ರಕ್ಷಿಸಿ. ತುಂಬಾ ಹೊಟ್ಟೆ ನೋವು ಇದೆ, ಈ ಬಗ್ಗೆ ಡಾಕ್ಟರ್ಗೆ ಹೇಳಿದ್ದೇನೆ. ಹುಷಾರಿಲ್ಲ ಎಂದ್ರೂ ವಿಚಾರಣೆ ಮಾಡುತ್ತಲೇ ಇದ್ದಾರೆ. ನನಗೆ ಹೊಟ್ಟೆ ಉರಿ, ಆಸ್ಪತ್ರೆಗೆ ಸೇರಿಸುತ್ತಿಲ್ಲ. ತಪ್ಪೇ ಮಾಡಿಲ್ಲ ಅಂದ್ರೂ ಹೇಗೆ ಒಪ್ಪಿಕೊಳ್ಳಲಿ. ನನ್ನ 30 ವರ್ಷದ ಅವಧಿಯಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಒಂದೇ ಒಂದು ಕೇಸಿಲ್ಲ ಎಂದು ರೇವಣ್ಣ ಕೋರ್ಟ್ನಲ್ಲೇ ಕಣ್ಣೀರು ಹಾಕಿದ್ದಾರೆ.






