ರಾಜಕೀಯ

ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್ ಪ್ರಕರಣ:  ಭವಾನಿ ರೇವಣ್ಣಗೂ ಕಾದಿದೆ ಸಂಕಷ್ಟ..!

Views: 126

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಹಾಗೂ ಕಿಡ್ನಾಪ್ ಕೇಸ್ ಗೆ ಸಂಬಂಧಿಸಿದಂತೆ ಎಸ್ಐಟಿ ಬಳಿ ಇರುವ ಸಂತ್ರಸ್ತೆಯರು ಭವಾನಿ ರೇವಣ್ಣರ ಹೆಸರನ್ನು ಉಲ್ಲೇಖ ಮಾಡಿದ್ದಾರೆ. ಇದರಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹಿರಿಯ ಸೊಸೆ ಭವಾನಿ ರೇವಣ್ಣಗೂ ಸಂಕಷ್ಟ ಕಾದಿದೆಯಾ ಎನ್ನುವ ಪ್ರಶ್ನೆ ಮೂಡಿದೆ.

ಒಂದು ಲೈಂಗಿಕ ಕಿರುಕುಳ ಆರೋಪ ಮತ್ತೊಂದು ಕಿಡ್ನಾಪ್ ಕೇಸ್ ಸಂಬಂಧಿಸಿದಂತೆ ಹೊಳೆನರಸೀಪುರ ಶಾಸಕ ಹೆಚ್.ಡಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಾಲು ಸಾಲು ಆರೋಪಗಳು ಮಾಡಲಾಗಿದೆ. ಸದ್ಯಕ್ಕೆ ಎಸ್ಐಟಿ ಬಳಿ ಇರುವ ಸಂತ್ರಸ್ತೆಯರು 2 ಕೇಸ್ ನಲ್ಲಿ ಭವಾನಿ ಹೆಸರನ್ನು ಉಲ್ಲೇಖಿಸಿದ್ದಾರೆ. ಇದರಿಂದ ಮಗನ ಕೇಸ್ ನಿಂದ ತಾಯಿಗೆ ಸಂಕಷ್ಟ ಎದುರಾಗುತ್ತಾ ಎಂದು ಕಾದು ನೋಡಬೇಕಿದೆ.

ಎರಡು ಕೇಸ್ ಗೆ ಸಂಬಂಧಿಸಿದಂತೆ  ಭವಾನಿಯವರು ಕರೆದರು ಎಂದು ಹೇಳಿ ಕಿಡ್ನಾಪ್ ಆರೋಪವಿದೆ. ಹೀಗಾಗಿ ಕಿಡ್ನಾಪ್ ಕೇಸ್ ನಲ್ಲಿ ಭವಾನಿಗೆ ಕಾನೂನು ಸಂಕಷ್ಟ ಸಾಧ್ಯತೆ ಇರಬಹುದು. ಈ ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದಾರೆ. ಈಗಾಗಲೇ ಕೇಸ್ ಸಂಬಂಧ ಭವಾನಿ ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಸದ್ಯ ಎರಡೂ ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸುತ್ತಿದ್ದು  ಈ ವೇಳೆ ಭವಾನಿ ವಿರುದ್ಧ ಸಾಕ್ಷಿ  ಸಿಕ್ಕಿದರೆ ಅವರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

Related Articles

Back to top button
error: Content is protected !!