ರಾಜಕೀಯ

ಚಾಮರಾಜ ನಗರದಲ್ಲಿ ಎಪ್ರಿಲ್ 29 ರಂದು ಮರು ಮತದಾನ 

Views: 107

ಚುನಾವಣಾ ಆಯೋಗ ಚಾಮರಾಜ ನಗರದ ಹನೂರಿನ ಮತಗಟ್ಟೆಯಲ್ಲಿ ಏಪ್ರಿಲ್ 29 ರಂದು ಮರು ಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.

ಚಾಮರಾಜನಗರ ಸಂಸದೀಯ ಕ್ಷೇತ್ರದ ಚುನಾವಣಾಧಿಕಾರಿ ಮತ್ತು ಸಾಮಾನ್ಯ ವೀಕ್ಷಕರು ಸಲ್ಲಿಸಿದ ವರದಿಗಳ ಆಧಾರದ ಮೇಲೆ ಮತ್ತು ಎಲ್ಲಾ ವಸ್ತು ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಂಡ ನಂತರ ಚುನಾವಣಾ ಆಯೋಗ ಮರು ಮತದಾನ ಮಾಡುವಂತೆ ಘೋಷಿಸಿದೆ.

ಚಾಮರಾಜ ನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಚಾಮರಾಜ ನಗರ ಪಾರ್ಲಿಮೆಂಟರಿ ಕ್ಷೇತ್ರದ ಹಂಸೂರು ವಿಧಾನಸಭಾ ಕ್ಷೇತ್ರ ಇಂಡಿಗನಾಥ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಂಡಿಗನಾಥ, 221 ರ ಮತಗಟ್ಟೆ ಸಂಖ್ಯೆ 146 ರಲ್ಲಿ ಏಪ್ರಿಲ್ 26 ರಂದು ನಡೆದ ಮತದಾನವು ಸಂಪೂರ್ಣವಾಗಿಲ್ಲ ಮತ್ತು ಮತದಾನ ಸಂಧರ್ಭದಲ್ಲಿ ಕಲ್ಲು ತೂರಾಟ, ಇವಿಎಂ ಮಷಿನ್ ಗಳೆಲ್ಲವೂ ಹಾನಿಗೊಳಗಿವೆ

ಈ ಕಾರಣದಿಂದ ಇಂಡಿಗನಾಥ ಗ್ರಾಮದಲ್ಲಿ ಮರು ಮತದಾನ ಮಾಡುವಂತೆ ಚುನಾವಣಾ ಆಯೋಗ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು ತಿಳಿಸಿದೆ. 1951 ಆಯೋಗದ ಸೂಚನೆಗೆ ಅನುಗುಣವಾಗಿ ಏಪ್ರಿಲ್ 29 ರಂದು ಮತಗಟ್ಟೆಯಲ್ಲಿ ಹೊಸದಾಗಿ ಮತದಾನಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಚಾಮರಾಜ ನಗರ ಜಿಲ್ಲೆಯ ಇಂಡಿಗನಾಥ ಗ್ರಾಮದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಬೇಕೋ ಬೇಡವೋ ಎಂಬ ವಿಷಯದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಇವಿಎಂ ಮಷಿನ್ ಗಳೆಲ್ಲವೂ ಹಾಳಾಗಿದ್ದು, ಈ ಹಿನ್ನೆಲೆ ಮರು ಮತದಾನ ನಡೆಯಲಿದೆ.

Related Articles

Back to top button
error: Content is protected !!