ಮಂಡ್ಯದಲ್ಲಿ ಸುಮಲತಾ ಸೈಲೆಂಟ್,ಕುಮಾರಸ್ವಾಮಿ ಪರ ಪ್ರಚಾರಕ್ಕೆ ಬಾರದ ರೆಬೆಲ್ ಲೇಡಿ..! ಯಾವ ಪಕ್ಷಕ್ಕೆ ಲಾಭ..!!!

Views: 32
ಮಂಡ್ಯ: ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ತೆರೆಬಿದ್ದಿದೆ. ಆದರೂ ಮಂಡ್ಯ ಚುನಾವಣಾ ಕಣಕ್ಕೆ ಸುಮಲತಾ ಯಾಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಚರ್ಚೆಗೆ ಗ್ರಾಸವಾಗಿದೆ.ನಾಳೆ ಮತದಾನ ನಡೆಯಲಿದ್ದು ಸುಮಲತಾ ಸೈಲೆಂಟ್ ಆಗಿದ್ದು ಮಂಡ್ಯ ವಿಚಾರದಲ್ಲಿ ಯಾರಿಗೆ ಪ್ಲಸ್ ಆಗುತ್ತೆ, ಯಾರಿಗೆ ಮೈನಸ್ ಆಗುತ್ತೆ ಎನ್ನುವ ಕುತೂಹಲ ಮೂಡಿದೆ.
ಲೋಕಸಭಾ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಕಡೇ ದಿನದವರೆಗೂ ಸುಮಲತಾ, ಮಂಡ್ಯದತ್ತ ತಲೆಯೇ ಹಾಕಿಲ್ಲ. ಮೈತ್ರಿ ಪರ ಪ್ರಚಾರ ಮಾಡಬೇಕಿದ್ದ ಸುಮಲತಾ, ನಿರೀಕ್ಷೆಯಂತೆ ದೂರವೇ ಉಳಿದು ರಾಜಕೀಯ ದಾಳ ಉರುಳಿಸಿದ್ದಾರೆ. ರೆಬೆಲ್ ಲೇಡಿಯ ಈ ಆಟಕ್ಕೆ ಬೆಂಬಲಿಗರು ಮತ್ತು ಆಪ್ತರಲ್ಲಿ ಗೊಂದಲ ಮುಂದುವರೆದಿದೆ. ಬಿಜೆಪಿಗೆ ಸೇರಿದ್ದರೂ ಅಂತರ ಕಾಯ್ದುಕೊಂಡಿದ್ದ, ಸುಮಲತಾ ಸ್ವಕ್ಷೇತ್ರ ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಲ್ಲಿ ಸಂಚರಿಸಿ ಪ್ರಚಾರ ಮಾಡಿದ್ದರು
ಕ್ಷೇತ್ರದ 6 ತಾಲೂಕಿನಲ್ಲಿ ಮೈತ್ರಿ ಸಮಾವೇಶಗಳು ನಡೆದಿದ್ದರು ಸುಮಲತಾ ಗೈರಾಗಿದ್ದಾರೆ.ಪ್ರತ್ಯೇಕವಾಗಿಯೂ ಮೈತ್ರಿ ಪರ ಮತ ಕೇಳದೆ ಸುಮಲತಾ ನಿಗೂಢ ಹೆಜ್ಜೆ ಇರಿಸಿದ್ದಾರೆ. ದಳಪತಿಗಳ ಮೇಲಿನ ಹಳೇ ದ್ವೇಷ ಇನ್ನೂ ಮರೆತಿಲ್ವಾ ಅನ್ನೋ ಪ್ರಶ್ನೆಗಳು ಕ್ಷೇತ್ರದಲ್ಲಿ ಹರಿದಾಡ್ತಿದೆ. ಖುದ್ದು ಮಾಜಿ ಸಿಎಂ ಹೆಚ್ಡಿಕೆ ಮನೆಗೆ ಭೇಟಿ ಬಳಿಕವೂ ಪ್ರಚಾರಕ್ಕೆ ಸಂಸದೆ ಮನಸ್ಸು ಮಾಡಿಲ್ಲ. ಸುಮಲತಾ ಅವರ ಈ ನಿಲುವು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ಸುಮಲತಾ ಸೈಲೆಂಟ್ ಆಗ್ತಿದ್ದಂತೆ ಎರಡು ಪಕ್ಷಗಳಲ್ಲೂ ಮತಕ್ಕಾಗಿ ಕಸರತ್ತು ಆರಂಭ ಆಗಿದೆ. ಸಚಿವ ಚಲುವರಾಯಸ್ವಾಮಿ, ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಲ್ಲ. ಅಂಬರೀಶ್ ಅಭಿಮಾನಿಗಳು ನೂರಕ್ಕೆ ನೂರು ನಮ್ಮ ಪರ ಇರ್ತಾರೆ ಅಂತ ಹೇಳಿದ್ದಾರೆ. ಅಲ್ಲದೆ, 2019ರ ಚುನಾವಣೆಯಲ್ಲಿ ದಳದ ಜೊತೆ ಮೈತ್ರಿಯಿದ್ರೂ ತಾವು ಸೈಲೆಂಟ್ ಆಗಿದ್ದನ್ನು ಸುಮಲತಾ ಬೆಂಬಲಿಗರನ್ನು ನೆನಪಿಸಿದ್ದಾರೆ.
ಆದರೆ, ಮಂಡ್ಯ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಂಡಿಸುವ ವಾದವೇ ಬೇರೆ. ಸುಮಲತಾ ಬಿಜೆಪಿ ಸೇರಿರುವುದರಿಂದ ತಮಗೆ ಬೆಂಬಲ ನೀಡಿದಂತೆ ಅನ್ನೋದು ಹೆಚ್ಡಿಕೆ ವ್ಯಾಖ್ಯಾನ. ಒಟ್ಟಾರೆ, ಮಂಡ್ಯ ರಾಜಕಾರಣ ತಂತ್ರ-ಮಂತ್ರ ಎಂದಿನಂತೆ ನಿಗೂಢವಾಗಿದೆ. ಯಾರ ಪರ ಹೇಗೆ ಒಲವು ವ್ಯಕ್ತ ಆಗುತ್ತೆ ಅನ್ನೋದು ಕಾಲವೇ ಉತ್ತರ ನೀಡಲಿದೆ






