ಲೋಕಸಭಾ ಚುನಾವಣೆ: ಪ್ರಥಮ ಹಂತದ ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಮನೆ ಪ್ರಚಾರ

Views: 24
ಮೈಸೂರು:ಕಳೆದ ಒಂದೂವರೆ ತಿಂಗಳಿನಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳು ಮತಯಾಚನೆ ಮಾಡಿದ್ದು, ಬುಧವಾರ ಸಂಜೆಯಿಂದಲೇ ಬಹಿರಂಗ ಪ್ರಚಾರ ಅಂತ್ಯವಾಗಲಿದೆ.ನಾಳೆಯಿಂದ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಲಿದ್ದಾರೆ.
ಬುಧವಾರ ಸಂಜೆ 5 ರಿಂದಲೇ ಸೆಕ್ಷನ್ 144 ಜಾರಿಯಾಗಲಿದೆ. ಜತೆಗೆ ಬಹಿರಂಗ ಪ್ರಚಾರಕ್ಕೂ ತೆರೆ ಬೀಳಲಿದೆ. ಅಭ್ಯರ್ಥಿ ಸೇರಿ ಕೇವಲ 5 ಮಂದಿಯಷ್ಟೆ ಮನೆಮನೆ ಪ್ರಚಾರ ನಡೆಸಬಹುದು. ಐದಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ. ಏಪ್ರಿಲ್ 24ರಂದು ಸಂಜೆ 5 ಗಂಟೆ ಬಳಿಕ ಸಭೆ, ಸಮಾರಂಭ, ಉತ್ಸವ, ರ್‍ಯಾಲಿ ಹಾಗೂ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ.
ಮತದಾನಕ್ಕೆ ಇನ್ನು 48 ಗಂಟೆಗಳಷ್ಟೆ ಬಾಕಿ ಇದೆ. ಹೀಗಾಗಿ ಮತದಾರರ ಗಮನ ಸೆಳೆಯಲು ಇನ್ನಿಲ್ಲದ ಕಸರತ್ತುಗಳು ಜೋರಾಗಲಿವೆ.ರಾಜಕೀಯ ಭಾಷಣ, ಆರೋಪ-ಪ್ರತ್ಯಾರೋಪಗಳಿಗೂ ಅವಕಾಶಗಳಿಲ್ಲ. ಮದ್ಯದಂಗಡಿಗಳು ಸಹ ಸಂಪೂರ್ಣ ಬಂದ್ ಆಗಲಿವೆ. ಏಪ್ರಿಲ್ 24ರ ಸಂಜೆ 5ರಿಂದ ಏಪ್ರಿಲ್ 26ರ ಮಧ್ಯರಾತ್ರಿ 12ರವರೆಗೆ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ






