ಶಿಕ್ಷಣ
ಶಿಕ್ಷಕಿಯೊಂದಿಗೆ ಅಸಭ್ಯ ವರ್ತನೆ ಮತ್ತು ಮಾನಸಿಕ ಕಿರುಕುಳ ನೀಡಿದ ಬಸ್ರೂರು ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕನಿಗೆ ಷರತ್ತು ಬದ್ಧ ಜಾಮೀನು

Views: 519
ಕುಂದಾಪುರ: ಬಸ್ರೂರಿನ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಶಾಲಾ ಸಂಚಾಲಕ ತನ್ನೊಂದಿಗೆ ಕೊಠಡಿಯಲ್ಲಿ ಶಿಕ್ಷಕಿಯನ್ನು ಅಸಭ್ಯವಾಗಿ ವರ್ತಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೊರಬಂದಿದ್ದ ಆ ಶಾಲೆಯ ಉಪ ಪ್ರಾಂಶುಪಾಲೆ ಪೊಲೀಸರಿಗೆ ಏ.1ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮದೇ ಶಿಕ್ಷಣ ಸಂಸ್ಥೆಯ ಉಪಪ್ರಾಂಶುಪಾಲೆಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿರುವ ಆರೋಪಿ ಬಸ್ರೂರಿನ ಆಂಗ್ಲ ಮಾಧ್ಯಮ ಖಾಸಗಿ ಶಿಕ್ಷಣ ಸಂಸ್ಥೆಯ ಸಂಚಾಲಕ ಸಂತೋಷ್ ಶೆಟ್ಟಿಗೆ ಕುಂದಾಪುರದ ಜಿಲ್ಲಾ ನ್ಯಾಯಾಲಯವು ಷರತ್ತು ಬದ್ಧ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರ ವಕೀಲ ಹಂದಕುಂದ ಅಶೋಕ ಶೆಟ್ಟಿ ವಾದಿಸಿದ್ದರು.