ರಾಜಕೀಯ

ಬೇಳೂರಿನಲ್ಲಿ ಬಿಜೆಪಿ ಗ್ರಾಮೀಣ ಸಮಾವೇಶ,”ಮೋದಿ ಸರಕಾರದ ಜನೋಪಯೋಗಿ ಕಾರ್ಯಕ್ರಮಗಳು ಬಿಜೆಪಿಗೆ ಶ್ರೀರಕ್ಷೆ” —ಡಾ.ಬೇಳೂರು ರಾಘವೇಂದ್ರ ಶೆಟ್ಟಿ

Views: 51

ಕೋಟ: ನರೇಂದ್ರ ಮೋದಿ ಸರಕಾರದ ಜನೋಪಯೋಗಿ ಕಾರ್ಯಕ್ರಮಗಳು ಬಿಜೆಪಿಗೆ ಶ್ರೀರಕ್ಷೆ ಎಂದು ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಹೇಳಿದರು.

ಅವರು ಕುಂದಾಪುರ ತಾಲೂಕಿನ ಬೇಳೂರು ದೇವಸ್ಥಾನ ಬೆಟ್ಟಿನಲ್ಲಿ ಲೋಕಸಭಾ ಚುನಾವಣೆಯ ಹಿನ್ನಲ್ಲೆಯಲ್ಲಿ ಭಾರತೀಯ ಜನತಾ ಪಕ್ಷ ಇದರ ಬೇಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ಸಮಾವೇಶದಲ್ಲಿ ಮಾತನಾಡಿ ನರೇಂದ್ರ ಮೋದಿ ಈ ದೇಶಕ್ಕೆ ಭದ್ರ ಅಡಿಪಾಯವನ್ನು ಇತ್ತಿದ್ದಾರೆ ಅದು ದೇಶದ ಅಕ್ಷಯ ಪಾತ್ರೆ ರೂಪದಲ್ಲಿ ಕಂಗೋಳಿಸುತ್ತಿದೆ ಇದನ್ನು ಸಹಿಸದ ಕಾಂಗ್ರೆಸ್ ಹೀನರಾಜಕಾರಣದಲ್ಲಿ ನಿರತವಾಗಿದೆ ಬೇಳೂರು ಎಂಬ ಗ್ರಾಮದಲ್ಲಿ ಬೆಜೆಪಿ ಅತಿಹೆಚ್ಚು ಮತಗಳನ್ನು ಬಿಜೆಪಿಗೆ ನೀಡಲಿದೆ.ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ಕಾರ್ಯಶೈಲಿ ಹಾಗೂ ನರೇಂದ್ರ ಮೋದಿಜೀ ಆಡಳಿತ ವೈಕರಿ ದಾಖಲೆಯ ಮತಗಳ ಅಂತರದಿಂದ ವಿಜಯಶಾಲಿಯಾಗಿ ಹೊರಹೊಮ್ಮಲಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿ , ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ,ಕುಂದಾಪುರ ಮಂಡಲ ಉಪಾಧ್ಯಕ್ಷ ಶರತ್ ಹೆಗ್ಡೆ, ಶಕ್ತಿಕೇಂದ್ರದ ಅಧ್ಯಕ್ಷ ರವಿಶೆಟ್ಟಿ ಬೇಳೂರು, ಮಾಜಿ ರೈತ ಮೋರ್ಚಾ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ,ಕುಂದಾಪುರ ಪ್ರಧಾನ ಮಂಡಲ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ, ಸುಧೀರ್ ಕೆ.ಎಸ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗಣಪತಿ ಶ್ರೀಯಾನ್, ಬಿಜೆಪಿ ಮುಖಂಡರಾದ ಭರತ್ ಶೆಟ್ಟಿ, ಸತೀಶ್ ಗುಳ್ಳಾಡಿ ,ದಿನೇಶ್ ದೇಲಟ್ಟು, ದಯಾನಂದ್ ಉಪಸ್ಥಿತರಿದ್ದರು.

Related Articles

Back to top button
error: Content is protected !!