ರಾಜಕೀಯ

ಜೆಡಿಎಸ್ ಮುಖಂಡ ರಾಜಶೇಖರ್ ಕಾಂಗ್ರೆಸ್ ಸೇರ್ಪಡೆ:ಜೆಡಿಎಸ್ಗೆ ಮತ್ತೆ ಶಾಕ್‌ ಕೊಟ್ಟ ಡಿಕೆ ಬ್ರದರ್ಸ್

Views: 40

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಜೆಡಿಎಸ್‌ ಹಾಗೂ ಬಿಜೆಪಿ ಲೋಕಸಭಾ ಚುನಾವಣೆಗೆ ಮೈತ್ರಿಯಾಗಿದೆ. 28 ಕ್ಷೇತ್ತದಲ್ಲೂ ಗೆಲುವು ಸಾಧಿಸಲು ಮಾಸ್ಟರ್‌ ಪ್ಲಾನ್‌ ನಡೆಸಿದ್ದು, ಇತ್ತ ದಳಪತಿಗಳಿಗೆ ಡಿ ಕೆ ಬ್ರದರ್ಸ್‌ ಬಿಗ್‌ ಶಾಕ್‌ ನೀಡಿದ್ದಾರೆ.

ಹೌದು, ಕಳೆದ ವಾರವಷ್ಟೇ ರಾತ್ರೋರಾತ್ರಿ ಡಿ ಕೆ ಶಿವಕುಮಾರ್‌ ಬರೋಬ್ಬರಿ 200 ಕ್ಕೂ ಹೆಚ್ಚು ಜೆಡಿಎಸ್‌ ಮುಖಂಡರನ್ನ ಕಾಂಗ್ರೆಸ್‌ ಪಕ್ಷಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ರು, ಇದೀಗ ಡಿ ಕೆ ಸುರೇಶ್‌ ರಾಮನಗರದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಭೈರೇಗೌಡರು, ಜೆಡಿಎಸ್ ಮುಖಂಡರಾದ ರಾಜಶೇಖರ್ ಅವರನ್ನ ಪಕ್ಷಕ್ಕೆ ಕರೆತರುವ ಮೂಲಕ ಡಿ ಕೆ ಬ್ರದರ್ಸ್‌ ಶಾಕ್‌ ನೀಡಿದ್ದಾರೆ.

ಇನ್ನೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ ಕೆ ಸುರೇಶ್‌ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಿಂದಾಗಿ ಬಿಜೆಪಿಯು ಐಟಿ, ಇಡಿ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಪ್ರಯೋಗಿಸುತ್ತಿದೆ. ಈ ಪ್ರಯೋಗಗಳು ಪ್ರತಿ ಚುನಾವಣೆಯಲ್ಲೂ ನಡೆಯುತ್ತಿದ್ದು, ನಮಗೆ ಇದು ಹೊಸತಲ್ಲ ಎಂದು ಸಂಸದರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ತಿಳಿಸಿದರು.

Related Articles

Back to top button
error: Content is protected !!