ಆರ್ಥಿಕ

2 ಕಾರು 1ಬೈಕ್ ನಲ್ಲಿ ಸಾಗಿಸುತ್ತಿದ್ದ ಕೋಟ್ಯಾಂತರ  ಹಣ ಪತ್ತೆ

Views: 87

ಬೆಂಗಳೂರು, ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಾದರಿ ನೀತಿಸಂಹಿತೆ ಕಟ್ಟುನಿಟ್ಟಿನ ಜಾರಿ ಹಿನ್ನಲೆಯಲ್ಲಿ ಜಯನಗರ 4ನೇ ಬ್ಲಾಕ್ ನಲ್ಲಿ ಕೋಟ್ಯಾಂತರ ರೂಪಾಯಿ ಹಣ ಪತ್ತೆಯಾಗಿದೆ.

ಜಯನಗರ 4ನೇ ಬ್ಲಾಕ್ ಗಣಪತಿ ದೇವಾಲಯದ ಬಳಿ 2 ಕಾರು ಹಾಗೂ 1 ಬೈಕ್ ನ್ನು ತಡೆದು ಪರಿಶೀಲನೆ ನಡೆಸಿದ ಎಂಸಿಸಿ ತಂಡ ಕಾರುಗಳಲ್ಲಿ ಹಣ ಇರುವುದನ್ನು ಪತ್ತೆಹಚ್ಚಿದೆ.

ಎರಡು ಕಾರುಗಳಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನು ಪಡೆದ ಎಂಸಿಸಿ ತಂಡ ಗಣಪತಿ ದೇವಾಲಯದ ಬಳಿ ತಡೆದು ತಪಾಸಣೆಗೊಳಪಡಿಸಿದಾಗ, ಒಂದು ಕಾರಿನೊಳಗಿದ್ದ ಬ್ಯಾಗ್ ಗಳಲ್ಲಿ ಹಣ ಇರುವುದು ಪತ್ತೆಯಾಗಿದೆ. ಮತ್ತೊಂದು ಕಾರಿನ ಬಾಗಿಲನ್ನು ತೆಗೆಯಲು ಆಗಿಲ್ಲ. ಎರಡೂ ಕಾರುಗಳಲ್ಲಿ ಕೋಟ್ಯಾಂತರ ರೂ. ಸಾಗಾಣಿಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಈ ಕಾರುಗಳು ಮತ್ತು ಬೈಕ್ ಯಾರಿಗೆ ಸೇರಿದ್ದು ಎಂಬುದರ ಮಾಹಿತಿ ಈ ತನಕ ಮಾಹಿತಿ ತಿಳಿದುಬಂದಿಲ್ಲ. ಕಾರಿನಲ್ಲಿದ್ದ ಹಣವನ್ನು ಯಾರು ಎಲ್ಲಿಗೆ ಕೊಂಡೊಯ್ಯುತ್ತಿದ್ದರು? ಯಾರಿಗೆ ಸೇರಿದ್ದು ಎಂಬ ಮಾಹಿತಿ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ ಕಾರುಗಳಲ್ಲಿನ ಬ್ಯಾಗ್ಗಳಲ್ಲಿ ಹಣ ಇರುವುದರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿಯನ್ನು ಎಂಸಿಸಿ ತಂಡ ನೀಡಿದೆ.

Related Articles

Back to top button
error: Content is protected !!