ಉಡುಪಿ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಶೇ. 96.33 ಫಲಿತಾಂಶ

Views: 48
ಉಡುಪಿ:ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು 2023 -24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶದೊಂದಿಗೆ ಒಟ್ಟು ಶೇ. 96.33 ಉತ್ತಮ ಫಲಿತಾಂಶ ದಾಖಲಿಸಿದೆ.
ವಿಜ್ಞಾನ ವಿಭಾಗದಲ್ಲಿ 159 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 101 ವಿಶಿಷ್ಟ ಶ್ರೇಣಿಯಲ್ಲಿ 56 ಪ್ರಥಮ ಶ್ರೇಣಿಯಲ್ಲಿ 02 ದ್ವಿತೀಯ ಶ್ರೇಣಿಯಲ್ಲಿ ಸೇರಿ ಒಟ್ಟು 59 ವಿದ್ಯಾರ್ಥಿಗಳೂ ಉತ್ತೀರ್ಣರಾಗಿ ಶೇ.100 ಅತ್ಯುತ್ತಮ ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ 151 ವಿದ್ಯಾರ್ಥಿಗಳು ಹಾಜರಾಗಿದ್ದು, 46 ವಿಶಿಷ್ಟ ಶ್ರೇಣಿಯಲ್ಲಿ, 82 ಪ್ರಥಮ ಶ್ರೇಣಿಯಲ್ಲಿ, 12 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಲಾ ವಿಭಾಗದಲ್ಲಿ ಒಟ್ಟು 16 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 01 ವಿಶಿಷ್ಟ ಶ್ರೇಣಿಯಲ್ಲಿ, 05 ಪ್ರಥಮ ಶ್ರೇಣಿಯಲ್ಲಿ, 05 ದ್ವಿತೀಯ ಶ್ರೇಣಿಯಲ್ಲಿ, ಉತ್ತೀರ್ಣರಾಗಿರುತ್ತಾರೆ. ಒಟ್ಟು ಕಾಲೇಜಿನ ಫಲಿತಾಂಶ ಶೇ.96.33 ಬಂದಿರುತ್ತದೆ.
ಉತ್ತಮ ಫಲಿತಾಂಶ ದಾಖಲಿಸಿದ್ದಕ್ಕಾಗಿ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀಧರ್ ಕೆ. ರಾವ್, ಕೋಶಾಧಿಕಾರಿ ಸಿಎ ಗಣೇಶ್ ಹೆಬ್ಬಾರ್, ಆಡಳಿತ ಮಂಡಳಿ ಪ್ರತಿನಿಧಿ ಪ್ರೋ. ನಿತ್ಯಾನಂದ, ಸಂಸ್ಥೆಯ ಪ್ರಾಂಶುಪಾಲರಾದ ಸಂಜೀವ್ ನಾಯ್ಕ್ ಕಾಲೇಜಿಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನೂ, ಉಪನ್ಯಾಸಕ ವರ್ಗದವರನ್ನೂ ಅಭಿನಂಧಿಸಿದ್ದಾರೆ.