ಕೃಷಿ

ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್

Views: 0

ಕುಂದಾಪುರದಿಂದ 18 ಕಿಲೋ ಮೀಟರ್ ದೂರದ ಕೆದೂರು ಗ್ರಾಮದ ಶಾನಾಡಿ ಎಂಬಲ್ಲಿ ನೀರಾವರಿಗೆ ಅಷ್ಟು ಯೋಗ್ಯವಲ್ಲದ ಪ್ರದೇಶದಲ್ಲಿ ಕಾಳುಮೆಣಸು, ತೆಂಗು, ಅಡಿಕೆ, ಗೇರು, ಭತ್ತ, ಜೇನು, ಹೈನುಗಾರಿಕೆ, ಹಲಸು ಕೃಷಿಯಿಂದ ಅತೀ ಸಣ್ಣ ರೈತರಾದರೂ ಅತೀ ಕಡಿಮೆ ಖಚಿ೯ನಲ್ಲಿ ಹೆಚ್ಚು ಲಾಭಾಂಶವನ್ನು ಶಾನಾಡಿ ರಾಮಚಂದ್ರ ಭಟ್ ಮತ್ತು ಯಶೋದಮ್ಮನವರು ಸಾಧಿಸಿ ತೋರಿಸಿದ್ದಾರೆ.
ಬೆಂಗಳೂರು ಕೃಷಿ ವಿ. ವಿ. ಯಲ್ಲಿ ನಡೆದ ಕೃಷಿ ಮೇಳದಲ್ಲಿ ವಿ. ವಿ. ವ್ಯಾಪ್ತಿಯ 17 ಜಿಲ್ಲೆಗಳಲ್ಲಿ ಅತ್ಯುತ್ತಮ ಕೃಷಿಕರು ಎಂಬುದಾಗಿ ಗುರುತಿಸಿಕೊಂಡಿರುವ ಇವರನ್ನು ‘ಉತ್ತಮ ಸಾವಯವ ಪ್ರಗತಿಪರ ಕೃಷಿಕ’ ಗೌರವ ಪಡೆದಿದ್ದಾರೆ. ಇತ್ತೀಚೆಗೆ ಕಳೆದ ಮೂರು ವಷ೯ಗಳಿಂದ ವಾರಾಹಿ ನೀರಾವರಿ ಆಶ್ರಯ ಪಡೆದು 15 ಎಕರೆ ಭೂಮಿಯಲ್ಲಿ ಕಬ್ಬು ಬೆಳೆಸಿ, ಆಲೆಮನೆ ಮಾಡಿಕೊಂಡು 40 ಟನ್ ಸಾವಯವ ಬೆಲ್ಲ , ಜೋನಿ ಬೆಲ್ಲ ,ಕಬ್ಬಿನ ಹಾಲು, ಮಡ್ಡಿಯಿಂದ ಜೀವಾಮೃತ ತಯಾರಿಸಿ, ತಾವೇ ಮಾರುಕಟ್ಟೆ ಸೃಷ್ಟಿಸಿದ್ದಾರೆ.

ಕಾಳು ಮೆಣಸು ಕೊಯ್ಯಲು ಹೊಸ ಪ್ರಯೋಗ
ಇವರು ಹಳೆಯ ಸೀರೆಯನ್ನು ಒಂದು ಕಡೆ ಮಡಚಿ ಹೊಲಿದು ಹೀಗೆ 2 ಸೀರೆಯನ್ನು 20 ಫೀಟ್+ 20 ಫೀಟ್ ಜೋಡಿಸಿ 35 ರಿಂದ 40 ಫೀಟ್ ಎತ್ತರಕ್ಕೆ ಹೋಗಿ ಸೀರೆಯನ್ನು ಸೊಂಟಕ್ಕೆ ಕಟ್ಟಿಕೊಂಡು, ಮೆಣಸಿನ ಕಾಳು ಕೊಯ್ದು ಅದಕ್ಕೆ ಮೆಣಸಿನ ಕಾಳನ್ನು ಹಾಕಿದರೆ ತಳ ಭಾಗದಲ್ಲಿರುವ ಚೀಲದಲ್ಲಿ ಶೇಖರಣೆಯಾಗಿ,ಮೇಲೆ ಮತ್ತು ಕೆಳಗೆ ಹತ್ತುವ ಕೆಲಸ ಉಳಿದಂತಾಗುತ್ತದೆ ಎಂಬ ಪ್ರಯೋಗ ಮಾಡಿದ್ದಾರೆ.

ನವಗೃಹ ಸಸ್ಯ
ನವ ಗೃಹ ಹೋಮಕ್ಕೆ ಬೇಕಾಗಿರುವ ಶಮಿ, ಧಬೆ೯,ಕೆದಿರೆ,ಪಾಲಷಾ, ಅತ್ತಿ, ಉತ್ತರಣೆ, ಎಕ್ಕೆ ಅಶ್ವತ್ಥ, ಗರಿಕೆ ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆದು ಪೊಜೆ ಪುನಸ್ಕಾರ ಮತ್ತು ಆಯುವೇ೯ದ ಔಷಧಗಳಿಗೆ
ಬೇಡಿಕೆ ಪಡೆದು ಕೊಂಡಿದ್ದಾರೆ.

ಮನೆಯ ತೋಟದಲ್ಲಿ ಇಂಗುಗುಂಡಿ
ನೆಲ ಜಲ ಸಂರಕ್ಷಣೆಗಾಗಿ ತಮ್ಮ ತೋಟದೊಳಗಿಂದ ನೀರನ್ನು ಹೊರಕ್ಕೆ ಬಿಡದೆ ದೊಡ್ಡ ಇಂಗು ಗುಂಡಿಯನ್ನು ಸ್ಥಾಪಿಸಿ, ಭೂ-ಸಾರವನ್ನು ಸಂರಕ್ಷಣೆ ಮಾಡಿದ್ದರಿಂದ 20 ವಷ೯ಗಳ ಹಿಂದಿನಿಂದ 30ಅಡಿ ಉದ್ದ 14 ಅಡಿ ಆಗಲದ ಬಾವಿಯಲ್ಲಿ ಮೇ ತಿಂಗಳಲ್ಲಿ 1 ಗಂಟೆ ನೀರು ಬರುತ್ತಿದ್ದು, ಈಗ 3 ಗಂಟೆ ನೀರು ಜಾಸ್ತಿಯಾಗಿ ಇಡೀ ತೋಟಕ್ಕೆ ಸಾಕಾಗುವಷ್ಟು ನೀರು ಸಿಗುತ್ತಿದೆ.

ಹಸಿರು ಮೇವು ಅಜೋಲ
ದನ ಕರುಗಳಿಗೆ ಬೇಕಾಗಿರುವ ಪ್ರೋಟೀನ್ ಯುಕ್ತ ಸಸ್ಯ ಇದಾಗಿದ್ದು, ಈ ಸಸ್ಯದೊಂದಿಗೆ 2 ಕೆ.ಜಿ ಪಶು ಆಹಾರ ಹಾಕಿದರೆ 1 ಕೆ. ಜಿ ಪಶು ಆಹಾರ ಉಳಿದು ಇದರಿಂದ 4 ಮಿಶ್ರ ತಳಿ ಗಳಿರುವ ದನಗಳಿಂದ ದಿವಸಕ್ಕೆ 40ರಿಂದ 45 ಲೀಟರ್ ಹಾಲು ವ್ಯಾಪಾರ ಮಾಡುತ್ತಾರೆ. ಜೊತೆಯಲ್ಲಿ ಇವರ ತೋಟದಲ್ಲಿ ತಾವೇ ಸಾವಯವ ಗೊಬ್ಬರ ತಯಾರಿಸಿ ವೀಳ್ಯದ ಎಲೆ. ಭಕ್ಕಳ್ ಎಲೆ, ಪಣಿಯೂರು ಮೆಣಸಿನ ಕಾಳು ಮುಂತಾದ ತರಕಾರಿಗಳನ್ನು ಬೆಳೆಯುತ್ತಾರೆ.

ಪ್ರಶಸ್ತಿ ಪುರಸ್ಕಾರ
ಬ್ರಹ್ಮಾವರ ಕೃಷಿಕೇಂದ್ರದ ವಿಜ್ಞಾನಿಗಳಾದ ಡಾ. ಹನುಮಂತಪ್ಪ, ಎಂ. ಆರ್. ಆನಂದ, ಡಾ.ದನಂಜಯ ಇವರ ನಿರಂತರ ಮಾಗ೯ದಶ೯ನ ಮತ್ತು ಪ್ರೋತ್ಸಾಹದಿಂದ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಾನಾ ಸಂಘ ಸಂಸ್ಥೆಗಳು ಇವರ ಸಾಧನೆ ನೋಡಿ ಗುರುತಿಸಿ ಗೌರವಿಸಿದ್ದಾರೆ. ‘ಉಡುಪಿ ಜಿಲ್ಲಾ ಸಮಗ್ರ ಕೃಷಿಕ ಪ್ರಶಸ್ತಿ’ ‘ರಾಜ್ಯೋತ್ಸವ ಪ್ರಶಸ್ತಿ’ ಉಡುಪಿ ಪರ್ಯಾಯ ದಬಾ೯ರ್ . ಹಾಲ್ ನಲ್ಲಿ ಪುರಸ್ಕಾರ ಭಟ್ಟರು ಪಡೆದಿರುತ್ತಾರೆ. ಜತೆಗೆ ಅವರ ಹೆಂಡತಿ ಚಲಿಸುವ ಗಾಡಿಗೆ ಹಿಂದಿನ ಚಕ್ರದಂತೆ ಸಾಥ್ ನೀಡಿದ್ದಾರೆ. ಇವರ ಇಬ್ಬರು ಮಕ್ಕಳು ಸಹ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸಂಪಕ೯: 9448914872

-ಸುಧಾಕರ ವಕ್ವಾಡಿ

Related Articles

Back to top button
error: Content is protected !!