ಶೋ಼ಷಿತರ ಆಶಾಕಿರಣ ಕೋಟೇಶ್ವರ ದಿ. ಗೋವಿಂದ ಶೆಟ್ಟಿಗಾರ

Views: 0
ಕುಂದಾಪುರ ತಾಲೂಕಿನ ಕೋಟೇಶ್ವರ ಪದ್ಮಶಾಲಿ ಸಮಾಜದ ಹಿರಿಯ ಮುಖಂಡ, ಎಡಪಂಥಿಯ ನಾಯಕ ದಿ.ಗೋವಿಂದ ಶೆಟ್ಟಿಗಾರರು ಕಳೆದ ವರ್ಷ ಜೂ. ೨ರಂದು ದೈವಾದೀನರಾಗಿದ್ದು, ಅವರು ಸತ್ಯ ಧರ್ಮ ನ್ಯಾಯ ನೀತಿಯ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಸಮಾನತೆಗಾಗಿ ಹೋರಾಟ ಮಾಡಿ ಬಡವರ ಆಶಾಕಿರಣ ಈಗ ನೆನಪು ಮಾತ್ರ.. ತಮ್ಮ ನೇರ ದಿಟ್ಟ ಸಮಾಜ ಸೇವೆಯಲ್ಲಿ ಕಣ್ಣ ಮುಂದೆ ಅನ್ಯಾಯ ಮಾಡುತ್ತಿರುವ ವ್ಯತ್ತಿಯನ್ನು ನೇರವಾಗಿ ಖಂಡಿಸಿ,ತರಾಟೆಗೆ ತೆಗೆದುಕೊಂಡು ಸ್ಥಳದಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿ ಎಲ್ಲಾ ವರ್ಗದ ಜನರ ಪ್ರಶಂಸೆಗೆ ಪಾತ್ರರಾಗಿದ್ದಲ್ಲದೆ, ಬೇರೆ ಬೇರೆ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೈ ಎನಿಸಿಕೊಂಡ ಸಮಾಜ ಸುಧಾರಕರಾಗಿದ್ದಾರೆ. ೧೯೭೦ ರಲ್ಲಿ ಕುಂದಾಪುರ ಪ್ರಭಾಕರ ಹಂಚಿನ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿರುವಾಗ ಸಿಪಿಐ(ಎಂ) ಪಕ್ಷದ ವೈಜ್ಞಾನಿಕ ಸಮಾಜವಾದ ಮತ್ತು ಸಮತಾವಾದ ಸಿದ್ಧಾಂತದ ಹರಿಕಾರ ಕಾರ್ಲ್ ಮಾರ್ಕ್ಸ್ ಇವರ “ಕಮ್ಯುನಿಸ್ಟ್ ಮ್ಯಾನಿಫೆಸ್ಟೋ” “ದಾಸ್ ಕ್ಯಾಪಿಟಲ್” ಸಿದ್ಧಾಂತದಲ್ಲಿ ಭೂಮಾಲಿಕರು-ರೈತರು, ಬಂಡವಾಳಗಾರರು- ಕಾರ್ಮಿಕರು, ಮೇಲುವರ್ಗ ಮತ್ತು ಕೆಳವರ್ಗದ ಮಧ್ಯ ನಡೆಯುತ್ತಿದ್ದ ವರ್ಗ ಸಂಘರ್ಷ ಹೋಗಲಾಡಿಸಿ ನ್ಯಾಯ, ಸಮಾನತೆ, ಶಾಶ್ವತ ಮೌಲ್ಯಗಳಿಗೆ ಹೋರಾಡುವ ಮನೋಭಾವನೆಗಳ ಸಿದ್ಧಾಂತಕ್ಕೆ ಪ್ರಭಾವಿತರಾಗಿ, ನಮ್ಮನ್ನು ಬಂಧಿಸುವ ಸಂಕೋಲೆಗಳಿAದ ಮುಕ್ತರಾಗಬೇಕು ಎಂಬ ದೃಷ್ಟಿಯಿಂದ ತನ್ನ ರಾಜಕೀಯ ಜೀವನವನ್ನು ಆರಂಭಿಸಿ ಕುಂದಾಪುರ ತಾಲೂಕು ಕಮ್ಯೂನಿಷ್ಟ್ ಪಕ್ಷದ ಅಧ್ಯಕ್ಷರಾಗಿ ಶ್ರಮ ಜೀವಿಗಳನ್ನು ಒಗ್ಗೂಡಿಸಿ ಶೋಷಿತರ ಪರವಾಗಿ ನಿಂತು ಹೋರಾಟ ಮಾಡಿ ರಾಜ್ಯ, ರಾಷ್ಟç ಮಟ್ಟದವರೆಗೂ ಗಮನಸೆಳೆದಿದ್ದಾರೆ. ಸ್ವಂತ ಕಾಲಮೇಲೆ ನಿಲ್ಲಬೇಕು ಎಂಬ ದೃಷ್ಟಿಯಿಂದ ಹಂಚಿನ ಕಾರ್ಮಿಕ ಕೆಲಸಕ್ಕೆ ರಾಜಿನಾಮೆ ನೀಡಿ ಮನೆಯ ಹತ್ತಿರ ಸÊಕಲ್ ಶಾಪ್ ತೆರೆದು ಅನೇಕ ಜನರಿಗೆ ಉದ್ಯೋಗ ನೀಡಿದ್ದಾರೆ. ೧೯೭೪ ರಲ್ಲಿ ಭೂ ಸುಧಾರಣೆ ಕಾಯಿದೆ ಜಾರಿಗೆ ಬಂದಾಗ ಗೇಣಿದಾರ ರೈತರ ಭೂಮಿ ಸಕ್ರಮಕ್ಕಾಗಿ ನಡೆದ ಹೋರಾಟದಲ್ಲಿ ಅನೇಕ ರೈತರಿಗೆ ನ್ಯಾಯ ಒದಗಿಸಿಕೊಟ್ಟಿದ್ದಾರೆ. ಪದ್ಮಶಾಲಿ ನೇಕಾರರ ಕುಲ ಕಸುಬು ನಸಿಸುತ್ತಿರುವಾಗ ನೇಕಾರಿಕೆಯನ್ನು ಉಳಿಸುವ ಸಲುವಾಗಿ ಆಧುನಿಕತೆಗೆ ತಕ್ಕಂತೆ ವಿದ್ಯುತ್ ಕೈಮಗ್ಗ ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದಾರೆ. ಹೀಗೆ ತನ್ನ ರಾಜಕೀಯ ಜೀವನವನ್ನು ಮುಂದುವರಿಸಿ ಕೋಟೇಶ್ವರ ಮಂಡಲ ಪಂಚಾಯತ್ ನಲ್ಲಿ ಎರಡು ಅವಧಿಗೆ ಸದಸ್ಯರಾಗಿ ಉತ್ತಮ ಸೇವೆಯಿಂದ ಜನಮನ ಗೆದ್ದಿದ್ದಾರೆ, ಕೋಟೇಶ್ವರ ವ್ಯವಸಾಯ ಸಹಕಾರಿ ಬ್ಯಾಂಕ್‌ನಲ್ಲಿ ನಿರ್ಧೇಶಕರಾಗಿ ರೈತರಿಗೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ.
೧೯೮೭ ರಲ್ಲಿ ಸಮಾಜ ಬಾಂಧವರನ್ನು ಸೇರಿಸಿಕೊಂಡು ಪದ್ಮಶಾಲಿ ಸಮಾಜ ಸಂಘವನ್ನು ಸ್ಥಾಪನೆ ಮಾಡಿ ಸ್ಥಾಪಕ ಅಧ್ಯಕ್ಷರಾಗಿ ೨೮ ವರ್ಷಗಳ ಕಾಲ ಅಧ್ಯಕ್ಷರಾಗಿ ಅಲ್ಪಸಂಖ್ಯಾತ ಪದ್ಮಶಾಲಿಗರ ಶೋಷಿತರ ವಿರುದ್ದ ಹಳ್ಳಿ ಹಳ್ಳಿಯಲ್ಲೂ ಹೋರಾಟ ಮಾಡಿ ಪದ್ಮಶಾಲಿ ಸಮಾಜದವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಿರಂತರ ಹೋರಾಟ ಮಾಡಿ ಸಮಾಜ ಬಾಂಧವರ ವಿಶ್ವಾಸಗಳಿಸಿದ್ದಾರೆ. ಸಮಾಜದ ಸಮರ್ಥ ಮಾರ್ಗದರ್ಶಕರಾಗಿ, ನಾಯಕರಾಗಿ ಗುರುತಿಸಿಕೊಂಡು ಮಾದರಿ ನಾಯಕನನ್ನು ೮೮ ನೇ ವಯಸ್ಸಿನಲ್ಲಿ ಜೂ. ೨. ೨೦೨೧ ರಂದು ಅಗಲಿದ್ದು ಸಮಾಜಕ್ಕೆ ತುಂಬಲಾರದ ನಷ್ಟ ಮೃತರಿಗೆ ಪತ್ನಿ, ನಾಲ್ವರು ಪುತ್ರರು ಇದ್ದಾರೆ. ಇತ್ತೀಚೆಗೆ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘದ ವಾರ್ಷಿಕೋತ್ಸವ ಹಾಗೂ ಗೋವಿಂದ ಶೆಟ್ಟಿಗಾರರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರ ಮಕ್ಕಳೆಲ್ಲರೂ ಸೇರಿ ಪ್ರತಿವರ್ಷ ಆರ್ಥಿಕ ಹಿಂದುಳಿದ ವಿದಾರ್ಥಿ ವೇತನಕ್ಕಾಗಿ ವಿದ್ಯಾನಿಧಿಗೆ ಸಹಾಯ ಹಸ್ತ ನೀಡಿ ತಂದೆಯAತೆ ಮಕ್ಕಳು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.
ಮಾಹಿತಿ ಸಂಗ್ರಹ ಮತ್ತು ವರದಿ : ಸುಧಾಕರ ವಕ್ವಾಡಿ