ಜನಮನ
ವಕ್ವಾಡಿ ಕರುಣಾಕರ ಶೆಟ್ಟಿಗಾರ ಅವರಿಗೆ ಪದ್ಮಶಾಲಿ ಶೌಯ೯ಕೇಸರಿ

Views: 7
ವಕ್ವಾಡಿ ಕರುಣಾಕರ ಶೆಟ್ಟಿಗಾರ ಇವರಿಗೆ ಪದ್ಮಶಾಲಿ ಶೌಯ೯ಕೇಸರಿ ಪ್ರಶಸ್ತಿ
ಕುಂದಾಪುರ : ಕಳೆದ 25 ವಷ೯ಗಳ ಕಾಲ ಉತ್ತರ ಭಾರತದ
ಗಡಿ ರಾಜ್ಯಗಳಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಅಂಚೆ ಮೇಲ್ವಿಚಾರಕ . ವಕ್ವಾಡಿ ಗುಂಡು ಶೆಟ್ಟಿಗಾರ ಮತ್ತು ಸುಶೀಲ. ಜಿ. ಶೆಟ್ಟಿಗಾರ ಇವರ ಪುತ್ರ ಕರುಣಾಕರ ಶೆಟ್ಟಿಗಾರ ವಕ್ವಾಡಿ.ಸೇನೆಯಲ್ಲಿ ವಾರೆಂಟ್ ಆಫೀಸರ್ ಆಗಿ
ಜಮ್ಮುವಿನ ಅಕ್ನೂರ್ ಮತ್ತು ಜಮ್ಮು -ಕಾಶ್ಮೀರದ ಉದಂಪುರದಲ್ಲಿ ಉಗ್ರಗಾಮಿಗಳ ವಿರುದ್ಧ ಜೀವದಹಂಗು ತೊರೆದು ಸೇನೆಯಲ್ಲಿ ಹೋರಾಟ ಮಾಡಿದ ಕಾಯ೯ತತ್ಪರತೆಗೆ ಸರಕಾರವು goc-in-c-commandation Card ನೀಡಿರುತ್ತಾರೆ.
ಇತ್ತೀಚೆಗೆ ಉಡುಪಿ ನೇಕಾರ ಪ್ರತಿಷ್ಠಾನ ಇವರು ಕೊಡಮಾಡಿದ ಪದ್ಮಶಾಲಿ ಶೌಯ೯ಕೇಸರಿ ಪ್ರಶಸ್ತಿಯನ್ನು ಕಿನ್ನಿಮುಲ್ಕಿ ಉಡುಪಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಪ್ರಸ್ತುತ ಉತ್ತರ ಭಾರತದ ಗುಹಾಹತಿಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.