ಐಟಿ ರೇಡ್ ವೇಳೆ ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆ

Views: 10
ಬೆಂಗಳೂರು: ಐಟಿ ರೇಡ್ ವೇಳೆ ಚಿನ್ನದ ಅಂಗಡಿ ಮಾಲೀಕನ ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಜುವೆಲ್ಲರಿ ಶಾಪ್ ಮನೆ ಮಾಲೀಕರ ಮನೆಯಲ್ಲಿ ಶೋಧ ನಡೆಸುವಾಗ 10 ಮತ್ತು 8 ವರ್ಷದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಯಡಿಯೂರಿನ ಸಾಕಮ್ಮ ಗಾರ್ಡನ್ ನಲ್ಲಿರುವ ಗೌರವ್ ಚೋರ್ಡಿಯಾ ಎಂಬ ಚಿನ್ನದ ಅಂಗಡಿ ಮಾಲೀಕನ ಮನೆಯಲ್ಲಿ ಬಿಹಾರದ ಗಾಯಾ ಜಿಲ್ಲೆ ಮೂಲದ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮನೆಯ ಮಾಲಕಿ ಪಿಂಕಿ ಜೈನ್ ಆರೈಕೆಗೆ ಕರೆತಂದಿದ್ದಾಗಿ ತಿಳಿದು ಬಂದಿದೆ. ಸದ್ಯ ಐಟಿ ಅಧಿಕಾರಿಗಳು ಅಪ್ರಾಪ್ತ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಕಾನೂನು ಬಾಹಿರವಾಗಿ ಮಕ್ಕಳ ಬಳಕೆ ವಿಚಾರವಾಗಿ ಜಯನಗರ ಪೊಲೀಸ್ ಠಾಣೆಯಲ್ಲಿ ಅಭೂಷಣ್ ಕುಟುಂಬದ ಮೇಲೆ FIR ದಾಖಲಾಗಿದೆ. ಅಶೋಕ್ ಕುಮಾರ್, ಶ್ರೇಯಸ್ ಚೌಡರೆ, ಗೌರವ್ ಮೇಲೆ FIR ದಾಖಲಾಗಿದೆ. ಸದ್ಯ ಅಪ್ರಾಪ್ತ ಮಕ್ಕಳು ಸಿದ್ದಾಪುರದ ಬಾಲ ರಕ್ಷಣಾ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಜಯನಗರ ಪೊಲೀಸರು ಆರೋಪಿಗಳ ವಿರುದ್ಧ ಸುಮೋಟೊ(ಸ್ವಯಂ ಪ್ರೇರಿತ) ಕೇಸ್ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.






