ಅಂತರ್ಮುಖಿಗಳು ಪ್ರೀತಿಯನ್ನು ವಿಭಿನ್ನವಾಗಿ ತೋರಿಸುತ್ತಾರೆ! ಅತ್ತಾಗ, ಸೋತಾಗ, ಕಷ್ಟದ ಪರಿಸ್ಥಿತಿ, ಏನೇ ಇದ್ದರೂ ಪ್ರೀತಿ ಪಾತ್ರರ ಜೊತೆ ನಿಲ್ಲುತ್ತಾರೆ…

Views: 5

ತಮ್ಮ ಪ್ರೀತಿಪಾತ್ರರ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯುವ ಮೂಲಕ ತಮ್ಮ ಪ್ರೀತಿಯನ್ನು ಎಕ್ಸ್ಪ್ರೆಸ್ ಮಾಡಲು ಬಯಸುತ್ತಾರೆ. ಪ್ರೀತಿ ಪಾತ್ರರ ಜೊತೆ ಊಟ ಮಾಡುವುದು, ಮನೆಯಲ್ಲಿ ಸಿನಿಮಾ ನೋಡುವುದು ಹೀಗೆ ಇಂತಹ ಸಮಯವನ್ನು ಇಷ್ಟಪಡುತ್ತಾರೆ. ಈ ಮೂಲಕ ಪ್ರೀತಿಯನ್ನು ಇಂಟ್ರೋವರ್ಟರ್ ತೋರಿಸುತ್ತಾರೆ.
ಪ್ರೀತಿ ತೋರಿಕೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ. ಕೆಲವರು ಬಚ್ಚಿಟ್ಟು ಪ್ರೀತಿ ಮಾಡಿದರೆ, ಇನ್ನು ಕೆಲವರು ಎಲ್ಲವನ್ನೂ ಬಿಚ್ಚಿಟ್ಟು ತಮ್ಮ ಪ್ರೀತಿಯನ್ನು ಸಂಗಾತಿ ಅಥವಾ ಪ್ರೀತಿ ಪಾತ್ರರಿಗೆ ವ್ಯಕ್ತಪಡಿಸುತ್ತಾರೆ. ಆದರೆ ಈ ಅಂತರ್ಮುಖಿ ಸ್ವಭಾವದ ವ್ಯಕ್ತಿಗಳು ಇರ್ತಾರಲ್ಲ ಅವರದ್ದು ಬೇರೆ ರೀತಿಯದ್ದೇ ಸ್ವಭಾವ ನೋಡಿ. ಹೊರಗಿನ ಜಗತ್ತನ್ನು ಹುಡುಕದೇ ತಮ್ಮೊಳಗೆ ತಮ್ಮನ್ನು ಕಂಡುಕೊಳ್ಳುವಂಥ ವ್ಯಕ್ತಿತ್ವದ ಅಂತರ್ಮುಖಿಗಳು ಬೇರೆ ರೀತಿಯಲ್ಲಿ ತಮ್ಮ ಪ್ರೀತಿಯನ್ನು ಇತರರಿಗೆ ವಿಭಿನ್ನವಾಗಿ ತೋರಿಸುತ್ತಾರೆ.
ಅಂತರ್ಮುಖಿಗಳು ಪ್ರೀತಿಯನ್ನು ತೋರಿಸುವ 8 ಅನನ್ಯ ಮಾರ್ಗಗಳು
1) ಸಮಯ ನೀಡುವ ಮೂಲಕ ಪ್ರೀತಿ
ತಮ್ಮ ಪ್ರೀತಿಪಾತ್ರರ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯುವ ಮೂಲಕ ತಮ್ಮ ಪ್ರೀತಿಯನ್ನು ಎಕ್ಸ್ಪ್ರೆಸ್ ಮಾಡಲು ಬಯಸುತ್ತಾರೆ. ಪ್ರೀತಿ ಪಾತ್ರರ ಜೊತೆ ಊಟ ಮಾಡುವುದು, ಮನೆಯಲ್ಲಿ ಸಿನಿಮಾ ನೋಡುವುದು ಹೀಗೆ ಇಂತಹ ಸಮಯವನ್ನು ಇಷ್ಟಪಡುತ್ತಾರೆ. ಈ ಮೂಲಕ ಪ್ರೀತಿಯನ್ನು ಇಂಟ್ರೋವರ್ಟರ್ ತೋರಿಸುತ್ತಾರೆ.
2) ಆಳವಾದ ಸಂಭಾಷಣೆಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ
ಕೇವಲ ಊಟ ಆಯ್ತಾ, ಏನ್ ಮಾಡ್ತಿದ್ದೀಯಾ ಇಂತಹ ಮಾತುಗಳಿಗಿಂತ ಅವರು ಆಳವಾದ ಸಂಭಾಷಣೆ ಅಂದರೆ ಅಲೋಚನೆ, ದೃಷ್ಟಿಕೋನ, ಆಸಕ್ತಿ ಇಂತಹ ವಿಷಯಗಳನ್ನು ಚರ್ಚಿಸುವ ಮೂಲಕ ಸಂವಹನ ನಡೆಸುತ್ತಾರೆ. ಇದು ಇವರು ಪ್ರೀತಿ ತೋರುವ ಮತ್ತೊಂದು ಮಾರ್ಗ.
3) ಹೆಲ್ಪ್ ಮಾಡುವ ಮೂಲಕ ಪ್ರೀತಿ ತೋರುವುದು
ಮಾತಿಗಿಂತ ಕೆಲಸ ಪರಿಣಾಮಕಾರಿ ಎಂದು ಅಂತರ್ಮುಖಿಗಳು ತಮ್ಮ ಪ್ರಮುಖ ಪ್ರೀತಿಯ ಭಾಷೆಗಳಲ್ಲಿ ಸಹಾಯ ಮಾಡುವುದನ್ನು ಸೇರಿಸಿಕೊಂಡಿದ್ದಾರೆ.
ಪ್ರೀತಿ ಪಾತ್ರರು ದಣಿದಾಗ ಇಲ್ಲಾ ಅವರಿಗೆ ನೆರವಾಗುವ ಮೂಲಕ ಪ್ರೀತಿಯನ್ನು ತೋರುತ್ತಾರೆ. ಕೆಲಸದಲ್ಲಿ ಪ್ರೀತಿ ಪಾತ್ರರು ಬ್ಯುಸಿಯಿದ್ದಾಗ ಅವರಿಗಾಗಿ ಅಡುಗೆ ಮಾಡುವುದು, ಮನೆ ಕ್ಲೀನ್ ಮಾಡುವುದು, ಅವರ ಕೆಲಸದಲ್ಲಿ ಸಹಾಯ ಮಾಡುವುದು ಇವರ ಪ್ರೀತಿ ಪರಿ.
4) ಅವರು ನಿಮ್ಮನ್ನು ತಮ್ಮ ಏಕಾಂಗಿ ಸಮಯದಲ್ಲೂ ಸೇರಿಸಿಕೊಳ್ಳುತ್ತಾರೆ
ಅವರ ಏಕಾಂಗಿ ಸಮಯದಲ್ಲೂ ಪ್ರೀತಿ ಪಾತ್ರರನ್ನು ಸೇರಿಸಿಕೊಳ್ಳುವ ಮೂಲಕ ಇಬ್ಬರಿಗೂ ಸಮಯ ನೀಡುತ್ತಾರೆ. ಏಕಾಂಗಿ ಸಮಯದಲ್ಲಿ ಪ್ರೀತಿಯ ವ್ಯಕ್ತಿಗಳಿಗೆ ಸಮಯ ನೀಡುವುದು ಪ್ರೀತಿ ಮತ್ತು ನಂಬಿಕೆಯನ್ನು ವ್ಯಕ್ತಪಡಿಸುವ ಅತ್ಯಂತ ಮಹತ್ವದ ವಿಧಾನ ಎಂದು ಅವರು ಭಾವಿಸಿದ್ದಾರೆ.
5) ಚಿಕ್ಕ ವಿಷಯಗಳನ್ನು ಸಹ ನೆನಪಿಸಿಕೊಳ್ಳುತ್ತಾರೆ
ಇವರು ಹೇಗಪ್ಪಾ ಅಂದರೆ ಚಿಕ್ಕ ಚಿಕ್ಕ ವಿಷಯಗಳನ್ನು ಸಹ ನೆನಪಿಟ್ಟುಕೊಳ್ಳುತ್ತಾರೆ. ಪ್ರೀತಿ ಪಾತ್ರರ ನೆಚ್ಚಿನ ಕಾಫಿ ಆಗಿರಬಹುದು, ಪುಸ್ತಕ ಆಗಿರಬಹುದು, ಅವರ ಇಷ್ಟ-ಕಷ್ಟಗಳನ್ನು ಹೀಗೆ ಸಣ್ಣ ವಿಷಯಗಳೂ ಕೂಡ ಇವರಿಗೆ ನೆನಪಿರುತ್ತದೆ. ಇದೇನ್ ಸಣ್ಣ ವಿಚಾರ ಅನಿಸಬಹುದು, ಈ ಸಣ್ಣ ವಿಷಯವನ್ನೇ ಇಟ್ಟುಕೊಂಡು ಇವರು ಪ್ರೀತಿ ತೋರಿಸುತ್ತಾರೆ.
6) ಭಾವನೆಗಳನ್ನು ಬರೆದು ವ್ಯಕ್ತಪಡಿಸುತ್ತಾರೆ
ಅಂತರ್ಮುಖಿಗಳ ವಿಶೇಷತೆ ಅಂದರೆ ಅವರು ಪದಗಳನ್ನು ಹೇಳುವುದಕ್ಕಿಂತ ಪದಗಳನ್ನು ಬರೆದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಬರವಣಿಗೆಯ ಮೂಲಕ ಭಾವನೆಗಳನ್ನು ನಿಖರವಾಗಿ ವ್ಯಕ್ತಪಡಿಸುವ ಆಲೋಚನೆ ಇವರದ್ದು. ಇದು ಮುಕ್ತವಾಗಿ ಅವರ ಭಾವನೆ ಹಂಚಿಕೊಳ್ಳುವ ವೇದಿಕೆ ಎಂದು ಭಾವಿಸುತ್ತಾರೆ.
7) ಅಗತ್ಯವಿರುವ ಸಮಯದಲ್ಲಿ ಅವರು ನಿಮಗಾಗಿ ಇರುತ್ತಾರೆ
ಅಂತರ್ಮುಖಿ ವ್ಯಕ್ತಿಗಳು ಹೆಚ್ಚುಮಾತನಾಡದೇ ಇರಬಹುದು ಆದರೆ ಅವರು ಯಾವಾಗಲು ನಿಮಗಾಗಿ ಇರುತ್ತಾರೆ. ಪ್ರೀತಿಸುವವರಿಗೆ ಅಗತ್ಯವಿದ್ದಾಗಲೆಲ್ಲಾ ಇವರು ಅವರ ಜೊತೆ ನಿಂತಿರುತ್ತಾರೆ. ಅತ್ತಾಗ, ಸೋತಾಗ, ಕಷ್ಟದ ಪರಿಸ್ಥಿತಿ, ಸಹಾಯ ಏನೇ ಪರಿಸ್ಥಿತಿ ಇದ್ದರೂ ಇವರು ಪ್ರೀತಿ ಪಾತ್ರರ ಜೊತೆ ನಿಲ್ಲುತ್ತಾರೆ.
8) ನಿಷ್ಠೆ ತೋರಿಸುವುದು ಸಹ ಪ್ರೀತಿಯ ಪರಿ
ಮಾರ್ಡನ್ ಯುಗದಲ್ಲಿ ನಿಷ್ಠೆ ಇವೆಲ್ಲಾ ನಿಮಗೆ ಹೊಸ ಪರಿಕಲ್ಪನೆ ಎನಿಸಬಹುದು. ಆದರೆ ಅಂತರ್ಮುಖಿಗಳಿಗೆ ಇದು ರೀತಿಯ ಮತ್ತೊಂದು ಮಾರ್ಗ. ಹೌದು, ನಿಷ್ಠೆ ಅವರ ಪ್ರೀತಿಯ ಮೂಲಾಧಾರವಾಗಿದೆ. ನಿಮಗೆ ಬೆಟ್ಟದಷ್ಟು ಪ್ರೀತಿ ತೋರುವುದು, ನಿಮ್ಮನ್ನು ಕಾಪಾಡುವುದು, ಕೇರ್ ಮಾಡುವುದು ಇಂತಹ ವಿಚಾರಗಳಿಂದ ನಿಮಗೆ ನಿಷ್ಠೆ ತೋರುತ್ತಾರೆ.






