ಕೇರಳ ಕೊರೊನಾ ಹೊಸ ರೂಪಾಂತರಿ ಪತ್ತೆ: ದೇಶಾದ್ಯಂತ ಮುನ್ನೇಚ್ಚರಿಕೆ ಕ್ರಮ

Views: 1
ಕೇರಳದ ರೋಗಿಯಲ್ಲಿ ಕೋವಿಡ್ 19 “ಜೆಎನ್.1” ಉಪ ತಳಿ ಪತ್ತೆಯಾಗಿರುವುದನ್ನು ಕೇಂದ್ರ ಸರ್ಕಾರ ಧೃಡಪಡಿಸಿದ್ದು ದೇಶಾದ್ಯಂತ ಮತ್ತೆ ಆತಂಕಕ್ಕೆ ಎಡೆ ಮಾಡಿದ್ದು, ದೇಶಾದ್ಯಂತ ಹೆಚ್ಚಿನ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ.
ಹೊಸ ಮಾದರಿಯ ಜೆಎನ್1 ತಳಿ ವೇಗವಾಗಿ ಸೋಂಕು ಹರಡುವ ಗುಣಲಕ್ಷಣ ಹೊಂದಿದ್ದು, ಸೌಮ್ಯ ಸ್ವಭಾವದ ವೈರಸ್ ಇದಾಗಿದೆ ಎಂದು ಹೇಳಲಾಗಿದ್ದರೂ ಮುನ್ನೆಚ್ಚೆರಿಕೆಯಾಗಿ ಕೇಂದ್ರ ಆರೋಗ್ಯ ಇಲಾಖೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಕೇರಳದಲ್ಲಿ ನಿನ್ನೆ ಒಂದೇ ದಿನ ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಕೇರಳದ ಪಾಲಂಕಡಿಯ ಅಬ್ದುಲ್ಲ (80) ಹಾಗೂ ಪೆಟ್ಪೊಲಿಯಾ ಕೆ. ಕುಮರನ್ (22) ಮೃತಪಟ್ಟಿದ್ದು, ಪನೂರ್ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 339 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಪ್ರಸ್ತುತ ದೇಶದಲ್ಲಿನ ಕೋವಿಡ್ ಪ್ರಕರಣಗಳು ಶೇ. 9ಪ ರಷ್ಟು ಸೌಮ್ಯ ಪ್ರಕರಣವಾಗಿವೆ. ಮನೆಯಲ್ಲಿಯೆ ಇದ್ದು ಚಿಕಿತ್ಸೆಯನ್ನು ಈ ಕೋವಿಡ್ ಸೋಂಕಿತರು ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಕೇರಳದಲ್ಲಿ ಕೋವಿಡ್ ರೂಪಾಂತರ ಜೆಎನ್.1 ಮೊದಲ ಪ್ರಕರಣ ಪತ್ತೆಯಾಗಿರುವುದರಿಂದ ಏಶಾದ್ಯಂತ ಹೆಚ್ಚಿನ ನಿಗಾ ವಹಿಸಲಾಗಿದೆ.
ಸರ್ವ ಸಿದ್ಧತೆ
ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಯ ಸನ್ನದ್ಧತೆ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಆರೋಗ್ಯ ಮೂಲಸೌಲಭ್ಯಗಳನ್ನು ಸಿದ್ದತೆ ಮಾಡಿಕೊಳ್ಳಲು ದೇಶದ ಎಲ್ಲಾ ರಾಜ್ಯಗಳಲ್ಲಿ ಅಣಕು ಪ್ರದರ್ಶನ ಹಮ್ಮಿಕೊಳ್ಳುವಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹೊಸ ಮಾದರಿಯ ಕೋವಿಡ್ ಸೋಂಕಿನ ಉಪತಳಿ ಭಾರತದಲ್ಲಿ ಮೊದಲ ಪ್ರಕರಣವಾಗಿದೆ. ಜೆಎನ್.1.ಬಿಎ.2.86 ರೂಪಾಂತರಕ್ಕೆ ನಿಕಟ ಸಂಬಂಧ ಹೊಂದಿದೆ, ಇದನ್ನು ಪಿರೋಲಾ ಎಂದೂ ಕರೆಯಲಾಗುತ್ತದೆ, ಇದನ್ನು ಇತ್ತೀಚೆಗೆ ಅಮೇರಿಕಾ ಮತ್ತು ಚೀನಾದಲ್ಲಿ ಈ ಮಾದರಿಯ ಸೋಂಕು ಪತ್ತೆ ಮಾಡಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ ನಡೆಯುತ್ತಿರುವ ದಿನನಿತ್ಯದ ಕಣ್ಗಾವಲು ಭಾಗವಾಗಿ ಡಿಸೆಂಬರ್ 8 ರಂದು ತಿರುವನಂತಪುರದ ಕೋವಿಡ್ ಪಾಸಿಟಿವ್ ರೋಗಿಯ ಮಾದರಿ ಜೆಎನ್.1ಕ್ಕೆ ಪಾಸಿಟೀವ್ ಪತ್ತೆಯಾಗಿದೆ ಎಂದು ತಿಳಿಸಿದೆ.
“ರೋಗಿಗೆ ನವೆಂಬರ್ 18 ರಂದು ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಇನ್‌ಫ್ಲುಯೆಂಜಾ-ಇಲ್‌ನೆಸ್‌ನ ಸೌಮ್ಯ ಲಕ್ಷಣಗಳೊಂದಿಗೆ ಮತ್ತು ನಂತರ ಚೇತರಿಸಿಕೊಂಡಿದ್ದಾರೆ”. ಆ ರೋಗಿಯಲ್ಲಿ ಹೊಸ ಮಾದರಿಯ ಸೋಂಕು ಇರುವುದು ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಕೇರಳದಿಂದ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚುತ್ತಿರುವ ಪ್ರವೃತ್ತಿ ಕಂಡುಬಂದಿದೆ, ಇದು ಐಎಲ್‌ಐ ಪ್ರಕರಣಗಳ ಮಾದರಿಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಪರೀಕ್ಷೆಗೆ ಉಲ್ಲೇಖಿಸಲಾಗಿದೆ. ಇತ್ತೀಚೆಗೆ ಪತ್ತೆಯಾದ ಹೆಚ್ಚಿನ ಕೋವಿಡ್ ಪ್ರಕರಣಗಳು ಸೌಮ್ಯವಾಗಿದ್ದು, ರೋಗಿಗಳು ಯಾವುದೇ ಚಿಕಿತ್ಸೆ ಇಲ್ಲದೆ ಮನೆಯಲ್ಲಿಯೇ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಸಿದ್ದತೆ:
ಹೊಸ ಮಾದರಿಯ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ‘ಡಿ.13ರಿಂದ ಆರಂಭವಾಗಿರುವ ಈ ಚಟುವಟಿಕೆಯನ್ನು ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ನಡೆಸಲಾಗುತ್ತಿದೆ.
“ಆರೋಗ್ಯ ಸಚಿವಾಲಯ, ಕೇರಳದ ಆರೋಗ್ಯ ಇಲಾಖೆಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಮತ್ತು ಪ್ರದೇಶದ ವಿವಿಧ ಸ್ಥಳಗಳನ್ನು ಮೇಲ್ವಿಚಾರಣೆ ಮಾಡುತ್ತದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.ಕೋವಿಡ್ -19ಗೆ ಧನಾತ್ಮಕವಾಗಿ ಕಂಡುಬರುವವರಲ್ಲಿ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಘದ ಕೋವಿಡ್ ಕಾರ್ಯಪಡೆಯ ಸಹ ಅಧ್ಯಕ್ಷ ಡಾ ರಾಜೀವ್ ಜಯದೇವನ್ ಹೇಳಿದ್ದಾರೆ.
ಎಓ.೧ ಅನ್ನು ಮೊದಲ ಬಾರಿಗೆ ಸೆಪ್ಟೆಂಬರ್ 2023 ರಲ್ಲಿ US ನಲ್ಲಿ ಪತ್ತೆ ಮಾಡಲಾಯಿತು. ಅಕ್ಟೋಬರ್ ಅಂತ್ಯದ ವೇಳೆಗೆ, 2ವೈರಸ್‌ಗಳಲ್ಲಿ 0.1% ಕ್ಕಿಂತ ಕಡಿಮೆಯಿತ್ತು. ಯುಎಸ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಜೆಎನ್.1ರ ಮುಂದುವರಿದ ಬೆಳವಣಿಗೆಯು ಇದು ಹೆಚ್ಚು ಹರಡುತ್ತದೆ ಅಥವಾ ಪ್ರತಿರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳುವಲ್ಲಿ ಉತ್ತಮವಾಗಿದೆ ಎಂದು ಸೂಚಿಸುತ್ತದೆ. “ಈ ಸಮಯದಲ್ಲಿ, ಪ್ರಸ್ತುತ ಚಲಾವಣೆಯಲ್ಲಿರುವ ಇತರ ರೂಪಾಂತರಗಳಿಗೆ ಹೋಲಿಸಿದರೆ ಎಓ.1 ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನು ಪ್ರಸ್ತುತಪಡಿಸುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದು ಹೇಳುತ್ತದೆ.
ರಾಜ್ಯದಲ್ಲೂ ಕಟ್ಟೆಚ್ಚರ
ನೆರೆಯ ಕೇರಳ ಸೇರಿದಂತೆ ದೇಶದ ವಿವಿಧೆಡೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಈ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಭೆ ನಡೆಸಿ ರಾಜ್ಯದ ಆಸ್ಪತ್ರೆಗಳಲ್ಲಿ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ರಾಜ್ಯದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳ ಪರೀಕ್ಷೆ ನಡೆಸಿ ಸೋಂಕು ಹೆಚ್ಚಾದರೆ ಆಗ ಯಾವ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ಮಾಡಲಾಗುವುದು. ಸಧ್ಯಕ್ಕೆ ಕಠಿಣ ನಿರ್ಬಂಧಗಳನ್ನು ಹೇರುವ ಆತಂಕದ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ ಈಗಲೇ ಗಡಿ ಬಂದ್ ಮಾಡಿ ಕೇರಳದಿಂದ ಬರುವವರ ಪರೀಕ್ಷೆ ಅವಶ್ಯಕತೆ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಮಂಗಳವಾರ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಮುಂದೆ ಏನೆಲ್ಲ ಮಾಡಬೇಕು ಎಂಬ ಬಗ್ಗೆ ತೀರ್ಮಾನ ಮಾಡಿತ್ತೇವೆ ಎಂದು ಸಚಿವ ದಿನೇಶ್‌ಗುಂಡೂರಾವ್ ಅವರು ಹೇಳಿದರು.
ಕೊರೊನಾ ಪರೀಕ್ಷೆ ನಡೆಸಲು ಅಗತ್ಯವಾದ ಆರ್‌ಟಿಪಿಸಿಆರ್ ಕಿಟ್‌ಗಳ ಖರೀದಿಗೂ ಟೆಂಡರ್ ಕರೆಯಲಾಗಿದೆ. ಸೋಂಕು ಲಕ್ಷಣ ಹೊಂದಿರುವವರಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಪ್ರಸ್ತುತ 58ಸಕ್ರಿಯ ಕೋವಿಡ್ ಸೋಂಕಿತರಿದ್ದು, ಈ ಪೈಕಿ 47 ಮಂದಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 11 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ನೀಡಿದರು.