ಶಿಕ್ಷಣ

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯಿಂದ 2024ನೇ ಸಾಲಿನ 10th, 12th ಪರೀಕ್ಷೆ ವೇಳಾಪಟ್ಟಿ ಪ್ರಕಟ

Views: 0

ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಡರಿ ಎಜುಕೇಷನ್‌, 2024ನೇ ಸಾಲಿನ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ದಿನಾಂಕಗಳನ್ನು ಇದೀಗ ಬಿಡುಗಡೆ ಮಾಡಿದೆ. ಫೆಬ್ರುವರಿ 13 ರಿಂದ ಮಾರ್ಚ್‌ 15 ರವರೆಗೆ ಹತ್ತನೇ ಕ್ಲಾಸ್‌ ಪರೀಕ್ಷೆಯು, ಫೆಬ್ರುವರಿ 15 ರಿಂದ ಏಪ್ರಿಲ್ 02 ರವರೆಗೆ ಹನ್ನೆರಡನೇ ಕ್ಲಾಸ್‌ ಪರೀಕ್ಷೆಯು ನಡೆಯಲಿದೆ.

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು 2024ನೇ ಸಾಲಿನ 10 ನೇ ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಇಂದು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮಂಡಳಿಯ ಅಧಿಕೃತ ವೆಬ್‌ಸೈಟ್‌ www.cbse.gov.in ನಲ್ಲಿ 10ನೇ ತರಗತಿ ಮತ್ತು 12ನೇ ತರಗತಿ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಅಪ್‌ಲೋಡ್ ಮಾಡಿದೆ. ಈ ಪರೀಕ್ಷೆಗಳನ್ನು ಬರೆಯಲಿರುವ ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಥವಾ ಈ ಕೆಳಗಿನ ಡೈರೆಕ್ಟ್‌ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಸಹ ಡೌನ್‌ಲೋಡ್‌ ಮಾಡಬಹುದು.

ಸಿಬಿಎಸ್‌ಇ ಪರೀಕ್ಷೆ ವೇಳಾಪಟ್ಟಿ ಚೆಕ್‌ ಮಾಡುವುದು ಎಲ್ಲಿ? ಹೇಗೆ?

ಸಿಬಿಎಸ್ಇ ಡೇಟ್‌ ಶೀಟ್‌ ಚೆಕ್‌ ಮಾಡಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://www.cbse.gov.in/cbsenew/cbse.html

2024 ನೇ ಸಾಲಿನ ಸಿಬಿಎಸ್‌ಇ 10th, 12th ಪರೀಕ್ಷಾ ವೇಳಾಪಟ್ಟಿ ಡೌನ್‌ಲೋಡ್‌ ವಿಧಾನ

– ವಿದ್ಯಾರ್ಥಿಗಳು ಸಿಬಿಎಸ್‌ಇ ವೆಬ್‌ಸೈಟ್‌ https://www.cbse.gov.in/cbsenew/cbse.html ಗೆ ಭೇಟಿ ನೀಡಿ.

– ತೆರೆದ ಮುಖಪುಟದಲ್ಲಿ ‘CBSE Class 10th Time Table 2024 / CBSE Class 12th Time Table 2024 ‘ ಎಂದಿರುವ ಲಿಂಕ್ ಕ್ಲಿಕ್ ಮಾಡಿ.

– ಪರೀಕ್ಷೆ ವೇಳಾಪಟ್ಟಿ ಪಿಡಿಎಫ್‌ ಫೈಲ್ ಓಪನ್ ಆಗುತ್ತದೆ. ಚೆಕ್‌ ಮಾಡಿಕೊಳ್ಳಿ.

-ಅಗತ್ಯವಿದ್ದಲ್ಲಿ ಡೌನ್‌ಲೋಡ್‌ ಮಾಡಿ, ಪ್ರಿಂಟ್‌ ತೆಗೆದುಕೊಳ್ಳಿ.

Related Articles

Back to top button