ಯುವಜನ

ಹಿಂದೂ ಸಂಘಟನೆಯ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ!

Views: 1

ಮಂಗಳೂರು: ಕರಾವಳಿಯಲ್ಲಿ ಅನ್ಯಕೋಮಿನ ಯುವಕ-ಯುವತಿ ಪ್ರೀತಿಸಿ ಮದುವೆಯಾಗಿದ್ದಾರೆ. ಭಜರಂಗ ಕಾರ್ಯಕರ್ತನನ್ನು ಮುಸ್ಲಿಂ ಯುವತಿ ವರಿಸಿದ್ದಾಳೆ.

ಇದು ಮಂಗಳೂರಿನ ಸುರತ್ಕಲ್‍ನಲ್ಲಿ ನಡೆದ ಹಿಂದೂ-ಮುಸ್ಲಿಂ ಲವ್ ಸ್ಟೋರಿಯಾಗಿದೆ.  ಮುಸ್ಲಿಂ ಯುವತಿಯೊಬ್ಬಳು ಭಜರಂಗದಳದ ಕಾರ್ಯಕರ್ತನನ್ನ ಮದುವೆಯಾಗಿದ್ದಾಳೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರೋ ಪ್ರಶಾಂತ್ ಭಂಡಾರಿ ಹಾಗೂ ಆಯೇಷಾ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಂತೆಯೇ ನ.30ರಂದು ಸುರತ್ಕಲ್‍ನ ಆಯೇಷಾ ಜೊತೆ ಪ್ರಶಾಂತ್ ಪರಾರಿಯಾಗಿದ್ದ.

ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿರೋ ಪ್ರಶಾಂತ್, ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಯತ್ನಿಸಿದ್ದ. ಇದೀಗ ಸುರತ್ಕಲ್ ನ ಮುಸ್ಲಿಂ ಯುವತಿಯ ಪ್ರೀತಿಸಿ ವರಿಸಿ ಸುದ್ದಿಯಾಗಿದ್ದಾನೆ.

ಇತ್ತ ಆಯೇಷಾ ಪೋಷಕರು ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

Related Articles

Back to top button
error: Content is protected !!