ಕುಂದಾಪುರ: ಮೊಸಾಯಿಕ್ ಚಿತ್ರ, ರೂಬಿಕ್ ಕ್ಯೂಬ್ ನಲ್ಲಿ ಎರಡು ಗಿನ್ನಿಸ್ ದಾಖಲೆ ಬರೆದ ಹಟ್ಟಿಯಂಗಡಿ ಸಿದ್ದಿ ವಿನಾಯಕ ಶಾಲಾ ಮಕ್ಕಳು

Views: 0
ಕುಂದಾಪುರ: ಹಟ್ಟಿಯಂಗಡಿಯ ಶ್ರೀ ಸಿದ್ಧಿ ವಿನಾಯಕ ವಸತಿ ಶಾಲೆ ರೂಬಿ ಕ್ ಟ್ಯೂಬ್ ನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಎರಡು ವಿಶ್ವ ದಾಖಲೆಗಳನ್ನು ನಿರ್ಮಿಸುವ ಮೂಲಕ ಗಿನ್ನಿಸ್ ಪುಸ್ತಕಕ್ಕೆ ಸೇರ್ಪಡೆಯಾಯಿತು.
ರೂಬಿಕ್ ಕ್ಯೂಬ್ ನಲ್ಲಿ ಅತಿ ದೊಡ್ಡ ದ್ವಿಮುಖ ಚಿತ್ರ ಹಾಗೂ ಅತಿ ಹೆಚ್ಚು ಮಂದಿ ಭಾಗವಹಿಸಿದ ರೂಬಿಕ್ ಕ್ಯೂಬ್ ನ ಚಿತ್ರ ಬಿಡಿಸಿದ ದೇಶದ ಏಕೈಕ ಶಾಲೆಯಾಗಿ ಇತಿಹಾಸ ಬರೆಯಲಾಗಿದೆ.
ಸಂಸ್ಥೆಯ ಎಂಡ್ ಜ್ಯುಡಿಕೇಟರ್ ರಿಷಿನಾಥ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.
ರವಿವಾರ ಸಂಸ್ಥೆಯ ಕಾರ್ಯದರ್ಶಿ ಪ್ರಾಂಶುಪಾಲ ಎಚ್ ಶರಣಕುಮಾರ್ ಅವರಿಗೆ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣ ಪತ್ರ ಹಸ್ತಾಂತರಿಸಿದರು.
ಸಂಸ್ಥೆಯ ಉಪಾಧ್ಯಕ್ಷ ವೇದಮೂರ್ತಿ ಬಾಲಚಂದ್ರ ಭಟ್, ಆಡಳಿತಾ ಧಿಕಾರಿ ವೀಣಾರಶ್ಮಿ, ರಮಾದೇವಿ ಆರ್ ಭಟ್, ಹಾಗೂ ಗಿನ್ನಿಸ್ ದಾಖಲೆ ಮಾರ್ಗದರ್ಶಕ ಪ್ರಥ್ವೀಶ್, ಉಪ ಪ್ರಾಂಶುಪಾಲ ರಾಮದೇವಾಡಿಗ ಉಪಸ್ಥಿತರಿದ್ದರು.
ಸಂಸ್ಥೆಯ ರಜತ ಮಹೋತ್ಸವ ಸಂಭ್ರಮಾಚರಣೆ ಸಂದರ್ಭ ಶಾಲಾ ವಿದ್ಯಾರ್ಥಿಗಳು ಮಾಡಿದ ಸಾಧನೆ ವಿಶ್ವ ಚರಿತ್ರೆ ಪುಟಗಳಲ್ಲಿ ದಾಖಲೆ ಬರೆದಿದೆ. ರೊಟೇಟಿಂಗ್ ರೂಬಿಕ್ಯೂಬ್ ನಲ್ಲಿ ಹಟ್ಟಿಯಂಗಡಿ ಸಿದ್ದಿ ವಿನಾಯಕ ವಸತಿ ಶಾಲೆಯ ಸಂಸ್ಥಾಪಕ ಎಚ್ ರಾಮಚಂದ್ರ ಭಟ್ ಅವರ ಚಿತ್ರ ರಚಿಸಲು 1,228 ಮಂದಿ ಬಾಗಿಯಾಗಿದ್ದರು.
1,300 ರಷ್ಟು ಕ್ಯೂಬ್ ಗಳಲ್ಲಿ 7,75×5.625ಚ.ಅಡಿ ಉದ್ದಳತೆಯ 42.78 ಚಿ.ಅಡಿಯ ವಿಸ್ತೀರ್ಣದಲ್ಲಿ ಎಚ್ ರಾಮಚಂದ್ರ ಭಟ್ಟರ ಚಿತ್ರ ಮೂಡಿಸಲಾಯಿತು.
ಕಳೆದ ನಾಲ್ಕು ದಿನಗಳಿಂದ ಗಿನ್ನಿಸ್ ಸಂಸ್ಥೆಯ ರಿಷಿನಾಥ್ ಸಾಧನೆಯ ಪರಿಶೀಲ ನಡೆಸಿ ನೂತನ ಗಿನ್ನೆಸ್ ದಾಖಲೆಯ ಘೋಷಣೆ ಮಾಡಿದರು.