ಆರೋಗ್ಯ

ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಆಘಾತಕಾರಿ ಸುದ್ದಿ,ಕಳೆದ 6 ತಿಂಗಳಲ್ಲಿ 25 ವರ್ಷದೊಳಗಿನ 840 ಯುವಕರು ಹಾರ್ಟ್​ ಅಟ್ಯಾಕ್​ನಿಂದ ಸಾವು

Views: 0

ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಗುಜರಾತ್​ನಿಂದ ಬಂದಿರುವ ಆತಂಕಕಾರಿ ಮಾಹಿತಿಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಗುಜರಾತ್​ನಲ್ಲಿ 1052 ಮಂದಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಶಿಕ್ಷಣ ಸಚಿವ ಕುಬೇರ್ ದಿಂಡೋರ್ ತಿಳಿಸಿದ್ದಾರೆ.

ಮೃತರಲ್ಲಿ ಶೇಕಡಾ 80 ರಷ್ಟು 11-25 ವರ್ಷದೊಳಗಿನವರು ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ನಾವು ಶಾಲೆಗಳಲ್ಲಿ ಮಕ್ಕಳಿ ಮತ್ತು ಶಿಕ್ಷಕರಿಗೆ ಈ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ನಮ್ಮ ತಂಡ ಶಾಲೆಗಳಿಗೆ ಭೇಟಿ ನೀಡಿ, ಸಿಪಿಆರ್​ ಮಾಡುವ ಬಗ್ಗೆ ತಿಳಿಸಿಕೊಡುತ್ತಿದ್ದೇವೆ ಎಂದಿದ್ದಾರೆ.

ಸಚಿವರು ನೀಡಿರುವ ಮಾಹಿತಿ ಪ್ರಕಾರ, ಮೃತ 1052 ಮಂದಿಯಲ್ಲಿ 840 ಜನ ಯುವಕರಾಗಿದ್ದಾರೆ. ಅದರಲ್ಲೂ 11-25 ವರ್ಷದೊಳಗಿನವರು. ಪ್ರತಿನಿತ್ಯ 170ಕ್ಕೂ ಹೆಚ್ಚು ದೂರವಾಣಿ ಕರೆಗಳು ಸರ್ಕಾರಿ ಆ್ಯಂಬುಲೆನ್ಸ್​ಗಾಗಿ ಬರುತ್ತಿವೆ. ಅವೆಲ್ಲವೂ ಕೂಡ ಹೃದಯಕ್ಕೆ ಸಂಬಂಧಿಸಿದ ದೂರುಗಳಾಗಿವೆ ಎಂದಿದ್ದಾರೆ

Related Articles

Back to top button