ಹೆಚ್ಚುತ್ತಿರುವ ಹೃದಯಾಘಾತಕ್ಕೆ ಕಾರಣವೇನು? ಕೋವಿಡ್-19 ಬಳಿಕ ICMR ಅಧ್ಯಯನದ ವರದಿ ಬಹಿರಂಗ!

Views: 0
ನವದೆಹಲಿ: ಇತ್ತೀಚೆಗೆ ದೇಶಾದ್ಯಂತ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. 20-30 ವರ್ಷದ ಯುವಕರೇ ಆಗಿರಲಿ, 50-60 ವಯಸ್ಸಿನವರೇ ಆಗಿರಲಿ, ಮಕ್ಕಳೂ ಸಹ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಕಾರಣ ಏನು ಅನ್ನೋ ಚರ್ಚೆ ದೇಶಾದ್ಯಂತ ಗಂಭೀರವಾಗಿದೆ.
ಈ ಆತಂಕದ ಮಧ್ಯೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಒಂದೂವರೆ ವರ್ಷ ಅಧ್ಯಯನ ನಡೆಸೋ ಮೂಲಕ ಮಹತ್ವದ ಅಂಶಗಳನ್ನು ಬಹಿರಂಗ ಪಡಿಸಿದೆ. ICMR ಅಧ್ಯಯನದ ಪ್ರಕಾರ ಇತ್ತೀಚೆಗೆ ಸಂಭವಿಸುತ್ತಿರುವ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣವಲ್ಲ. ಜೀವನ ಶೈಲಿಯಲ್ಲಿನ ಬದಲಾವಣೆಯೇ ಇದಕ್ಕೆ ಬಹುಮುಖ್ಯ ಕಾರಣ ಎನ್ನಲಾಗಿದೆ.
ಗುಜರಾತ್‌ನ ಗರ್ಭಾ ನೃತ್ಯದ ವೇಳೆ 10ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಸಾವನ್ನಪ್ಪಿದ ವರದಿಯಾಗಿತ್ತು. ಇದಾದ ಬಳಿಕ ದೇಶಾದ್ಯಂತ ಕೋವಿಡ್-19 ವಾಕ್ಸಿನ್‌ಗೂ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಲಿಂಕ್ ಇದೆ ಎನ್ನಲಾಗುತ್ತಿತ್ತು. ಈ ಸಂಬಂಧ ಸಮಗ್ರ ಅಧ್ಯಯನ ಮಾಡಿರುವ ICMR ಕೋವಿಡ್-19 ವಾಕ್ಸಿನ್‌ನಿಂದ ಯುವಕರು ಹಠಾತ್ ಸಾವು ಸಂಭವಿಸುತ್ತಿಲ್ಲ. ಕೋವಿಡ್ ವ್ಯಾಕ್ಸಿನ್ ಅನಿರೀಕ್ಷಿತ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದಿದೆ.
ಕಳೆದ 2021ರಿಂದ ICMR ಸುಮಾರು 729 ಸಾವಿನ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿದೆ. ಕೋವಿಡ್ಗೆ ತುತ್ತಾಗಿ ಬದುಕಿದ್ದವರ ಬಗ್ಗೆಯೂ ಅಧ್ಯಯನ ಮಾಡಲಾಗಿದೆ. ICMR ನಡೆಸಿದ ಅಧ್ಯಯನದಲ್ಲಿ ಕೋವಿಡ್ ವ್ಯಾಕ್ಸಿನ್ನಿಂದ ಅಪಾಯವಿಲ್ಲ ಎನ್ನಲಾಗಿದೆ. ಬದಲಿಗೆ ಹೃದಯಾಘಾತಕ್ಕೆ ಪ್ರಮುಖವಾದ ಕಾರಣ ಏನಂದ್ರೆ ದೈಹಿಕ ಕೆಲಸ, ಸಿಗರೇಟ್ ಹವ್ಯಾಸದಿಂದ ಹಠಾತ್ ಸಾವು ಸಂಭವಿಸುತ್ತಿದೆ ಎನ್ನಲಾಗಿದೆ.