ಆರ್ಥಿಕ

ಶೀಘ್ರದಲ್ಲೇ ಗೃಹಲಕ್ಷ್ಮೀ ಯೋಜನೆಯ 3 ನೇ ಕಂತು ಅಕೌಂಡ್‌ಗೆ : 2 ಬಾರಿ ಮಿಸ್ ಆದವರಿಗೂ ಈ ಬಾರಿ ಹಣ

Views: 11

ಗೃಹಲಕ್ಷ್ಮೀ ಮೂರನೇ ಕಂತಿನ ಹಣ ಅಕೌಂಡ್‌ಗೆ ಬರೋದು ಯಾವಾಗ ಎಂಬ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ, ಸದ್ಯಕ್ಕೆ ಸಿಗುವ ಉತ್ತರ ಶೀಘ್ರದಲ್ಲೇ ಬರಲಿದೆ ಎಂಬುದು. ಅಲ್ಲದೆ ಕಳೆದ ಎರಡು ಬಾರಿಗಿಂತಲೂ ಈ ಬಾರಿ ಫಲಾನುಭವಿಗಳ ಸಂಖ್ಯೆ ಹೆಚ್ಚು ಇದೆ. ಕೆಲವರ ತಾಂತ್ರಿಕ ದೋಷ ಸರಿಯಾಗಿ ಹೆಸರು ನೋಂದಣಿಯಾಗಿರುವುದರಿಂದ 2 ಬಾರಿ ಮಿಸ್ ಆದವರಿಗೂ ಈ ಬಾರಿ ಗೃಹಲಕ್ಷ್ಮೀ ಹಣ ಬರಲಿದೆ ಎಂಬುದು ಸಂತಸದ ವಿಷಯವಾಗಿದೆ.

ಕಳೆದ 2 ಕಂತಿನಲ್ಲಿ ಹಣ ಬಾರದ ಫಲಾನುಭವಿಗಳಿಗೆ ಈ ಕಂತಿನಲ್ಲಿ ಹಣ ಬಿಡುಗಡೆಯಾಗಲಿದೆ. ತಾಂತ್ರಿಕ ದೋಷದಿಂದಾಗಿ ಹಣ ಸಂದಾಯವಾಗಿರಲಿಲ್ಲ

ಈ ತನಕ ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿ 2,63,097 ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಿದೆ. 31,302 ಫಲಾನುಭವಿಗಳಿಗಳ ಹಣ ವರ್ಗಾವಣೆಯಾಗಬೇಕಿದೆ.

Related Articles

Back to top button
error: Content is protected !!