ಸಾಂಸ್ಕೃತಿಕ

ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆ: ಬೆಳ್ಳಿ ಹಬ್ಬದ ಪೂರ್ವಭಾವಿ ಸಭೆ

Views: 2

ಕನ್ನಡ ಕರಾವಳಿ ಸುದ್ದಿ: ಬಸ್ರೂರು ವಲಯ ಪದ್ಮಶಾಲಿ ಕ್ರಿಯಾ ವೇದಿಕೆಯ ಬೆಳ್ಳಿಹಬ್ಬದ ಪೂರ್ವಭಾವಿ ಸಭೆಯಲ್ಲಿ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಬಸ್ರೂರು ರಾಜೇಂದ್ರ ಶೆಟ್ಟಿಗಾರ್‌ ಅವರು ಬೆಳ್ಳಿಹಬ್ಬದ ಅಂಗವಾಗಿ ಹಮ್ಮಿಕೊಂಡ ಸಮಾಜಮುಖಿ ಕಾರ್ಯಕ್ರಮಗಳ ವಿವರ ನೀಡಿದರು.

ಈಗಾಗಲೇ ಒಂದು ದೇವಸ್ಥಾನ ಮತ್ತು ಒಂದು ಶಾಲೆಯ ವಠಾರವನ್ನು ಸ್ವಚ್ಛಗೊಳಿಸಲಾಗಿದೆ. ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ನಡೆಸಲಾಗಿದ್ದು, 118 ಯೂನಿಟ್ ರಕ್ತವನ್ನು ಸಂಗ್ರಹಿಸಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕಕ್ಕೆ ನೀಡಲಾಗಿದೆ. ಕೋಟೇಶ್ವರ, ಅಮಾಸೆಬೈಲು, ಸಾಸ್ತಾನ ಮತ್ತು ಬೈಕಾಡಿ ಪದ್ಮಶಾಲಿ ಸಂಘಟನೆಗಳ ನಡುವಿನ ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲಾಗಿದೆ.

25 ನೇ ವರ್ಷದ ಬೆಳ್ಳಿಹಬ್ಬವು ಡಿ.13 ರಂದು ಬಸ್ರೂರು ಶಾರದಾ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಅಧ್ಯಕ್ಷತೆಯನ್ನು ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ್‌ ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್, ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸಗ್ರಿ ವಿಠಲ ಶೆಟ್ಟಿಗಾರ್, ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುರೇಶ್ ಶೆಟ್ಟಿಗಾರ್, ಮುಂಬೈ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕೃಷ್ಣಾನಂದ ಶೆಟ್ಟಿಗಾರ್ ಸಾಲಿಕೇರಿ, ಜಪ್ತಿ ಕೃಷ್ಣ ಕೃಫಾ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಜಯಪ್ರಕಾಶ್ ಶೆಟ್ಟಿ, ಡೈರೆಕ್ಟರ್ ಆಫ್ ಟೆಕ್ನಾಲಜಿ ಯುಎಸ್ಎ ತೆಕ್ಕಟ್ಟೆ ರಾಘವೇಂದ್ರ ವೆಂಕಟರಮಣ ಶೆಟ್ಟಿಗಾರ್, ವಲಯ ಪದ್ಮಶಾಲಿ ಸಂಘಟನೆಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.

ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಕ್ರಿಯಾವೇದಿಕೆಯ ಅಧ್ಯಕ್ಷ ಕೈಲ್ಕೆರೆ ಚಂದ್ರಶೇಖರ ಶೆಟ್ಟಿಗಾರ್ ವಹಿಸಿದ್ದರು, ವಾಸ್ತು ತಜ್ಞ, ಜ್ಯೋತಿಷಿ ಡಾ.ಬಸವರಾಜ್ ಶೆಟ್ಟಿಗಾರ್, ಉದ್ಯಮಿ ಚಂದ್ರಶೇಖರ್ ಶೆಟ್ಟಿಗಾರ್ ಸುಣ್ಣಾರಿ, ವೇದಿಕೆಯ ಗೌರವ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿಗಾರ್, ಶಬರಿ ಎಂಟರ್ಪ್ರೈಸಸ್ ನಾಗರಾಜ್ ಶೆಟ್ಟಿ, ಶಿವರಾಮ ಶೆಟ್ಟಿಗಾರ್, ಸುಲೋಚನ ಶೆಟ್ಟಿಗಾರ್‌ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸುಬ್ಬಯ್ಯ ಶೆಟ್ಟಿಗಾರ್ ಸ್ವಾಗತಿಸಿದರು. ರಜತೋತ್ಸವ ಸಮಿತಿಯ ಕಾರ್ಯದರ್ಶಿ ರವೀಂದ್ರ ಶೆಟ್ಟಿಗಾರ್ ವಂದಿಸಿದರು.

ಸಾಧಕರಿಗೆ ಸಮ್ಮಾನ

ರಜತ ಮಹೋತ್ಸವ ವೇದಿಕೆಯಲ್ಲಿ ಕ್ಷೇತ್ರಗಳ ಸಮಾಜದ ವಿವಿಧ ಸಾಧಕರನ್ನು ವಿದ್ಯಾನಿಧಿ ದಾನಿಗಳನ್ನು ಹಾಗೂ ಕೂಡುಕಟ್ಟಿನ ದೇವಸ್ಥಾನಗಳ ಗುರಿಕಾರರು ಹಾಗೂ ಮೊಕ್ತೇಸರರನ್ನು ಸಮ್ಮಾನಿಸಲಾಗುವುದು. ಹಿರಿಯ ನೇಕಾರರನ್ನು ಹಾಗೂ ಬೆಳ್ಳಿಹಬ್ಬದ ದಾನಿಗಳನ್ನು ಗೌರವಿಸಲಾಗುವುದು. ಹಿರಿಯ ವಲಯ ಸಂಘಟನೆಗಳ ಸಂತ್ರಸ್ಥರಿಗೆ ಆರ್ಥಿಕ ನೆರವು. ಮನೆ ನಿರ್ಮಾಣದ ಫಲಾನುಭವಿಗಳಿಗೆ ಮಂಜೂರಾತಿ ಪತ್ರೈ ನೀಡಲಾಗುವುದು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮ್ಮಾನ ಮತ್ತು ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ. ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.

Related Articles

Back to top button
error: Content is protected !!