ಯುವಜನ

50 ವರ್ಷದ ಅಂಕಲ್ ಜತೆ 18ರ ಯುವತಿ ಪರಾರಿ!

Views: 370

ಕನ್ನಡ ಕರಾವಳಿ ಸುದ್ದಿ: 18 ವರ್ಷದ ಯುವತಿ ಜತೆ 50 ವರ್ಷದ ಅಂಕಲ್ ಲವ್ವಿ ಡವ್ವಿ ಶುರು ಮಾಡಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಅಂಕಲ್‌ನ ಪ್ರೇಮ ಪಾಷದಲ್ಲಿ ಸಿಲುಕಿದ ಯುವತಿ ಹುಬ್ಬಳ್ಳಿಯಿಂದ ಮಹಾರಾಷ್ಟ್ರ ಕೊಲ್ಹಾಪುರದ ಅಜ್ಜಿ ಮನೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದಾಳೆ. ಯುವತಿಯ ತಲೆಕೆಡೆಸಿ ಆಕೆಯೊಂದಿಗೆ ಅಂಕಲ್ ಊರು ಬಿಟ್ಟು ಪರಾರಿಯಾಗಿಯಾಗಿದ್ದು, ಇದರಿಂದ ಯುವತಿಯ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಈ ಜೋಡಿ ಓಡಿ ಹೋಗಿ 40 ದಿನಗಳಾದರೂ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಯುವತಿ ಮನೆಯವರು ಅಂಕಲ್‌ ವಿರುದ್ಧ ದೂರು ನೀಡಿದ್ದಾರೆ.

 

 

Related Articles

Back to top button