ಪ್ರವಾಸೋದ್ಯಮ

ಅಹ್ಮದಾಬಾದ್‌ನಲ್ಲಿ ವಿಮಾನ ದುರಂತ: ಹಾಸ್ಟೆಲ್ ನಲ್ಲಿದ್ದ 24 ಭಾವಿ ವೈದ್ಯರೂ ಸೇರಿ 265 ಮಂದಿ ಸಾವು

Views: 208

ಕನ್ನಡ ಕರಾವಳಿ ಸುದ್ದಿ: ಗುಜರಾತ್‌ನ ಅಹ್ಮದಾಬಾದ್ ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಪೈಲಟ್‌, ಸಿಬ್ಬಂದಿ ಸೇರಿ 242 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನ ಪತನವಾಗಿದೆ. ಟೇಕ್‌ ಆಫ್‌ ಆದ ಬೆನ್ನಲ್ಲೇ ಅನತಿ ದೂರದಲ್ಲಿದ್ದ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್‌ ಮೇಲೆ ವಿಮಾನ ಬಿದ್ದಿದೆ.

ಇದು ಇತ್ತೀಚೆಗೆ ಸಂಭವಿಸಿದ ಅತ್ಯಂತ ದೊಡ್ಡ ವಿಮಾನ ದುರಂತವಾಗಿದ್ದು, ಜಗತ್ತಿಗೆ ಜಗತ್ತೇ ಜೀವಕಳೆದುಕೊಂಡವರಿಗಾಗಿ ಕಂಬನಿ ಮಿಡಿದಿದೆ. ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ 169 ಭಾರತೀಯರು, 61 ವಿದೇಶಿಯರು, ಇಬ್ಬರು ಪೈಲಟ್‌, 10 ಸಿಬ್ಬಂದಿ ಸೇರಿ 242 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ಅಪ್ಪಳಿಸಿದ ಹಾಸ್ಟೆಲ್‌ನಲ್ಲೂ ಜೀವಹಾನಿಯಾಗಿದೆ. ಇದುವರೆಗೆ ಅಧಿಕಾರಿಗಳು 265 ಮೃತದೇಹ ಪತ್ತೆ ಹಚ್ಚಿ, ಆಸ್ಪತ್ರೆಗೆ ರವಾನಿಸಿದ್ದಾರೆ.

ವಿಮಾನ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ಗೃಹಸಚಿವ ಅಮಿತ್ ಶಾ, ವಿಮಾನ ಪತನಗೊಂಡ ಸ್ಥಳಕ್ಕೆ ದೌಡಾಯಿಸಿ, ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಮಿತ್ ಶಾ ಮಾತನಾಡಿದ್ದು, ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ಇತ್ತು. ಹೀಗಾಗಿ ರಕ್ಷಣಾ ಕಾರ್ಯ ಅಸಾಧ್ಯವಾಗಿತ್ತು ಎಂದಿದ್ದಾರೆ. ಇನ್ನು ಬಿಟ್ರಿಷ್ ಅಧಿಕಾರಿಗಳ ನಿಯೋಗವು ಕೂಡ ತಡ ರಾತ್ರಿಯೇ ಬಂದು ಪರಿಶೀಲನೆ ನಡೆಸಿದೆ..

ಇನ್ನು ವಿಮಾನ ದುರಂತದಲ್ಲಿ ಮೃತಪಟ್ಟಿರುವ ಒಬ್ಬಬ್ಬರದ್ದು ಒಂದೊಂದು ಕಥೆ ಇದೆ. ವಿಮಾನದಲ್ಲಿ ಕುಳಿತಿದ್ದ ರಾಜಸ್ಥಾನದ ಒಂದೇ ಕುಟುಂಬದ ಐವರು ಪ್ರಾಣ ಬಿಟ್ಟಿದ್ದಾರೆ. ರಾಜಸ್ಥಾನದ ಮೂಲದ ಪ್ರತೀಕ್ ಜೋಶಿ-ಡಾ.ಕೋಮಿ ವ್ಯಾಸ್ ಮೂವರು ಮಕ್ಕಳ ಜೊತೆ ಹೊಸ ಬದುಕಿನ ಕನಸು ಹೊತ್ತು ವಿಮಾನ ಏರಿದ್ದರು. ಮಕ್ಕಳ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದು, ಐವರು ಬಲಿಯಾಗಿದ್ದಾರೆ.

 

Related Articles

Back to top button
error: Content is protected !!